ಮಹಿಳೆಯರಿಗೆ ತಿಂಗಳಿಗೆ ₹2,500: ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌

Sampriya
ಸೋಮವಾರ, 6 ಜನವರಿ 2025 (14:01 IST)
Photo Courtesy X
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಘೋಷಿಸಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಪತ್ರಿಕೋಗೋಷ್ಠಿ ನಡೆಸಿ ಜನರಿಗೆ ನೀಡಲಿರುವ ಗ್ಯಾರಂಟಿ ಯೋಜನೆಯನ್ನು ಅನಾವರಣಗೊಳಿಸಿದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಅವರು, ದೆಹಲಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ಯಾರಿ ದೀದಿ ಯೋಜನೆ ಜಾರಿ ಮಾಡಲಿದ್ದೇವೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೀಡುತ್ತೇವೆ‌. ಪಕ್ಷ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮಾಡಿದ ಹಾಗೆಯೇ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

ದೆಹಲಿ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ದೆಹಲಿಯ ಜನರಿಗೆ 5 ದೊಡ್ಡ ಭರವಸೆಗಳನ್ನು ವಿಧಾನಸಭೆ ಚುನಾವಣೆಗೆ ನೀಡಲು ಹೊರಟಿದೆ. ಅದರ ಮೊದಲ ಗ್ಯಾರಂಟಿ ಪ್ಯಾರಿ ಯೋಜನೆಯಾಗಿದೆ.

ದೆಹಲಿಯ ಮಹಿಳೆಯರ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸುವ ಯೋಜನೆಯನ್ನು ತರಲು ಕಾಂಗ್ರೆಸ್ ಭರವಸೆ ನೀಡುತ್ತದೆ. ಎಎಪಿ ಈಗಾಗಲೇ ದೆಹಲಿಯ ಮಹಿಳೆಯರಿಗೆ 2100 ರೂ ಘೋಷಿಸಿರುವುದರಿಂದ, ಕಾಂಗ್ರೆಸ್ ಮಹಿಳೆಯರಿಗೆ 2500 ರೂ ಭರವಸೆ ನೀಡುವ ಮೂಲಕ ಒಂದು ಹೆಜ್ಜೆ ಮುಂದಿಡುತ್ತಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಯೋತ್ಪಾದನಾ ಜಾಲ ಹಿನ್ನೆಲೆ: ಅನಂತ್‌ನಾಗ್‌ನ ವೈದ್ಯರ ಮನೆ ಮೇಲೆ ಸಿಐಕೆ ದಾಳಿ

ಅಣ್ಣ ಶಿವಕುಮಾರ್ ಸಿಎಂ ಆಗುವ ಭವಿಷ್ಯದ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು ಗೊತ್ತಾ

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ

Karnataka Weather:ಕರಾವಳಿಯಲ್ಲಿ ಮಳೆ ನಿರೀಕ್ಷೆ, ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಸಾಧ್ಯತೆ

ಡಾ ಸಿಎನ್ ಮಂಜುನಾಥ್ ಪ್ರಕಾರ ಬಿಪಿ ಇರುವವರು ಇದೊಂದು ತಪ್ಪು ಮಾಡಬಾರದು

ಮುಂದಿನ ಸುದ್ದಿ
Show comments