Select Your Language

Notifications

webdunia
webdunia
webdunia
webdunia

ಇಂದೂ ಇಳಿಕೆ ಕಂಡ ಬೆಳ್ಳಿ ದರ; ಚಿನ್ನದ ಬೆಲೆ ಯಥಾಸ್ಥಿತಿ

ಇಂದೂ ಇಳಿಕೆ ಕಂಡ ಬೆಳ್ಳಿ ದರ; ಚಿನ್ನದ ಬೆಲೆ ಯಥಾಸ್ಥಿತಿ
ಬೆಂಗಳೂರು , ಬುಧವಾರ, 11 ಆಗಸ್ಟ್ 2021 (08:07 IST)
ಬೆಂಗಳೂರು, ಆ. 11: ನಿನ್ನೆಯವರೆಗೂ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. 10 ಗ್ರಾಂ ಅಪರಂಜಿ ಚಿನ್ನ (24 Carat Gold) ಬೆಲೆ 46,280 ರೂ ದರದಲ್ಲಿ ಮುಂದುವರಿದಿದೆ. 10 ಗ್ರಾಂ ಆಭರಣ ಚಿನ್ನ (22 Carat Gold) 45,280 ರೂ ದರ ಹೊಂದಿದೆ.

ಕಳೆದ ನಾಲ್ಕು ತಿಂಗಳಲ್ಲೇ ಇದು ಚಿನ್ನದ ಅತೀ ಕಡಿಮೆ ಬೆಲೆಯಾಗಿದೆ. ಇನ್ನು, ಬೆಳ್ಳಿ ದರ ಇಳಿಕೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ಕಡೆ ಬೆಳ್ಳಿ ಬೆಲೆ ಪ್ರತೀ ಗ್ರಾಮ್ಗೆ 30 ಪೈಸೆ ಇಳಿಕೆ ಕಂಡಿದೆ. 10 ಗ್ರಾಮ್ ಬೆಳ್ಳಿ ಬೆಲೆ 6,360 ರೂ ನಿಂದ 6,330 ರೂಪಾಯಿಗೆ ಇಳಿದಿದೆ. ಮೊನ್ನೆ ಸಿಲ್ವರ್ ದರ ಒಂದು ಕಿಲೋಗೆ ಬರೋಬ್ಬರಿ 1 ಸಾವಿರ ರೂಪಾಯಿಷ್ಟು ಇಳಿಕೆ ಕಂಡಿತ್ತು. ನಿನ್ನೆ 383 ರೂಪಾಯಿಯಷ್ಟು ಬೆಲೆ ತಗ್ಗಿತ್ತು. ಇವತ್ತು ಒಂದು ಕಿಲೋ ಬೆಳ್ಳಿ ಬೆಲೆಯಲ್ಲಿ 300 ರೂ ಇಳಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಸದ್ಯ ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 633 ರೂ ಇದೆ. ಮುಂಬೈ, ದೆಹಲಿ, ಕೋಲ್ಕತಾ, ಪುಣೆ, ಜೈಪುರ, ಲಕ್ನೋ ಮೊದಲಾದ ನಗರಗಳಲ್ಲೂ ಇದೇ ದರ ಇದೆ. ಕೇರಳ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬೆಳ್ಳಿ ಬೆಲೆ ತುಸು ದುಬಾರಿ ಇದ್ದು ಅಲ್ಲಿ ಒಂದು ಗ್ರಾಮ್ ಸಿಲ್ವರ್ 682 ರೂ ದರ ಹೊಂದಿದೆ.
ಇತ್ತ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಾಣುತ್ತಿರವಂತೆಯೇ ಪ್ಲಾಟಿನಂ ಬೆಲೆ ಏರುತ್ತಿದೆ. ಒಂದು ಗ್ರಾಮ್ ಪ್ಲಾಟಿನಂ ಬೆಲೆ 39 ರೂ ಏರಿದೆ. ಮೊನ್ನೆ ಗ್ರಾಮ್ಗೆ 2,320 ರೂ ಇದ್ದ ಪ್ಲಾಟಿನಂ ಬೆಲೆ ನಿನ್ನೆ 2,359 ರೂಪಾಯಿಗೆ ಏರಿದೆ. 100 ಗ್ರಾಮ್ ಪ್ಲಾಟಿನಂ ಬೆಲೆ 3,900 ರೂನಷ್ಟು ಏರಿಕೆಯಾಗಿ 2,35,900 ರೂ ಗೆ ಬಂದು ನಿಂತಿದೆ.
ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ:
1 ಗ್ರಾಮ್: 4,528 ರೂ
10 ಗ್ರಾಮ್: 45,280 ರೂ100 ಗ್ರಾಮ್: 4,52,800 ರೂ
ಅಪರಂಜಿ ಚಿನ್ನದ ಬೆಲೆ:
1 ಗ್ರಾಮ್: 4,628 ರೂ
10 ಗ್ರಾಮ್: 46,280 ರೂ
100 ಗ್ರಾಮ್: 4,62,800 ರೂ
ಬೆಂಗಳೂರಿನಲ್ಲಿ ಬೆಳ್ಳಿ ದರ:
1 ಗ್ರಾಮ್: 63.30 ರೂ
10 ಗ್ರಾಮ್: 633 ರೂ
100 ಗರಾಮ್: 6,330 ರೂ
1 ಕಿಲೋ: 63,300
ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ:
1 ಗ್ರಾಮ್: 2,320 ರೂ
10 ಗ್ರಾಮ್: 23,200 ರೂ


Share this Story:

Follow Webdunia kannada

ಮುಂದಿನ ಸುದ್ದಿ

ಲಡಾಖ್ನಲ್ಲಿ ಪರಿಸರ ಉಳಿಸಬೇಕಾ-ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾ..?