Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್ ಗುಣಮಟ್ಟ ಕಳಪೆ!

ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್ ಗುಣಮಟ್ಟ ಕಳಪೆ!
ನವದೆಹಲಿ , ಬುಧವಾರ, 4 ಆಗಸ್ಟ್ 2021 (16:39 IST)
ನವದೆಹಲಿ(ಆ.04): ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತನ್ನ ಬೆಂಗಳೂರು ಘಟಕದಲ್ಲಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ ಮೊದಲ 2 ಬ್ಯಾಚ್ಗಳು ನಿರ್ದಿಷ್ಟಗುಣಮಟ್ಟಹೊಂದಿರಲಿಲ್ಲ. ಹೀಗಾಗಿ ನಿಗದಿತ ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆ, ಪೂರೈಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ತಿಳಿಸಿದ್ದಾರೆ.

* ಗುಣಮಟ್ಟಪರೀಕ್ಷೆಯಲ್ಲಿ 2 ಕೋವ್ಯಾಕ್ಸಿನ್ ಬ್ಯಾಚ್ ವಿಫಲ
* ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್ ಗುಣಮಟ್ಟಕಳಪೆ
* ಇದರಿಂದ ಲಸಿಕೆ ಪೂರೈಕೆಯಲ್ಲಿ ತೀವ್ರ ಹಿನ್ನಡೆ
* ಹೊಸ ಬ್ಯಾಚ್ ತೃಪ್ತಿಕರ, ಇನ್ನು ಪೂರೈಕೆ ತೀವ್ರ
* ಕೇಂದ್ರ ಕೋವಿಡ್ ಲಸಿಕೆ ವಿಭಾಗದ ಅಧ್ಯಕ್ಷ ಅರೋರಾ ಹೇಳಿಕೆ
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ‘ಭಾರತ್ ಬಯೋಟೆಕ್, ಬೆಂಗಳೂರಲ್ಲಿ ಅತಿದೊಡ್ಡ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಆರಂಭಿಸಿತ್ತು. ಇದರಿಂದಾಗಿ ಲಸಿಕೆ ಪೂರೈಕೆ ತೀವ್ರಗೊಳ್ಳಬಹುದು ಎಂದು ಆಶಿಸಲಾಗಿತ್ತು. ಆದರೆ ಮೊದಲ 2 ಬ್ಯಾಚ್ಗಳು ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದವು. ಆದರೆ ಈಗ 3 ಹಾಗೂ 4ನೇ ಬ್ಯಾಚ್ ಲಸಿಕೆಗಳು ಬಂದಿದ್ದು, ಗುಣಮಟ್ಟಪರೀಕ್ಷೆಯಲ್ಲಿ ಉತ್ತಮವಾಗಿದ್ದು ಕಂಡುಬಂದಿವೆ. ಇವುಗಳನ್ನು ಈಗ ಲಸಿಕಾಕರಣಕ್ಕೆ ಕಳಿಸಲಾಗಿದೆ. ಮುಂದಿನ 4ರಿಂದ 6 ವಾರದಲ್ಲಿ ಉತ್ಪಾದನೆ ತೀವ್ರಗೊಳಿಸಿ ಪೂರೈಕೆ ಸುಧಾರಿಸಲಾಗುತ್ತದೆ’ ಎಂದಿದ್ದಾರೆ. ಇದೇ ವೇಳೆ, ‘ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದ ಲಸಿಕೆ ಬ್ಯಾಚ್ಗಳನ್ನು ಜನರಿಗೆ ಲಸಿಕೆ ನೀಡಲು ಪೂರೈಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೆ 1 ತಿಂಗಳಿಗೆ 30 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ಇದರಿಂದ ದಿನಕ್ಕೆ 1 ಕೋಟಿ ಮಂದಿಗೆ ಲಸಿಕೆ ನೀಡಿದಂತಾಗುತ್ತದೆ. ಡಿಸೆಂಬರ್ ಒಳಗೆ ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆ ನೀಡಿಕೆ ಇದರಿಂದ ಸಾಧ್ಯವಾಗಲಿದೆ ಎಂದು ಡಾ| ಅರೋರಾ ಹೇಳಿದ್ದಾರೆ.
ಫೈಜರ್, ಮಾಡೆರ್ನಾ ಪಟ್ಟು:
ಭಾರತಕ್ಕೆ ಬರಲು ಇಚ್ಛಿಸುತ್ತಿರುವ ವಿದೇಶಿ ಲಸಿಕೆಗಳಾದ ಫೈಜರ್ ಹಾಗೂ ಮಾಡೆರ್ನಾ, ‘ನಷ್ಟಪರಿಹಾರ ಷರತ್ತು’ ಸಡಿಲಿಸಬೇಕು ಎಂದು ಮನವಿ ಮಾಡುತ್ತಿವೆ. ಇದಕ್ಕೆ ಸರ್ಕಾರ ಒಪ್ಪದ ಕಾರಣ, ಅವುಗಳ ಪೂರೈಕೆ ಆರಂಭವಾಗಿಲ್ಲ. ಅದೂ ಅಲ್ಲದೆ ಪ್ರತಿ ಕಂಪನಿ ಪೂರೈಸಲು ಮುಂದಾಗಿರುವುದು ಅಂದಾಜು ಕೇವಲ 7 ಕೋಟಿ. 135 ಕೋಟಿ ಜನರಿಗೆ ಬೇಕಾಗಿರುವ ಪ್ರಮಾಣಕ್ಕೆ ಇದು ತೀರಾ ಕಡಿಮೆ. ಒಂದು ವೇಳೆ ಪ್ರತಿ ಕಂಪನಿ 10-20 ಕೋಟಿ ಡೋಸ್ಗೆ ಒಪ್ಪಿದರೆ ಆಗ ವಿನಾಯ್ತಿ ಬಗ್ಗೆ ಸರ್ಕಾರ ಯೋಚಿಸಬಹುದು ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ನೂತನ ಸಚಿವರು