ಬೆಂಗಳೂರು (ಜು. 05): ಮೂರನೇ ಅಲೆ ಆತಂಕ ಇರುವಾಗಲೇ ನಗರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಆರಂಭದಲ್ಲೇ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಬಿಬಿಎಂಪಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ಹಿನ್ನಲೆ ಈಗಾಗಲೇ ಚಾಲ್ತಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು ಬಿಗಿಗೊಳಿಸಲಾಗಿದ್ದು, ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಆದೇಶ ನೀಡಲಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಆಗಸ್ಟ್ 14ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಇದರ ಜೊತೆಗೆ ನಗರದಲ್ಲಿ ಸೋಂಕು ಹರಡುವಿಕೆ ಸೂಚ್ಯಂಕ ಹಠಾತ್ತನೆ ಏರಿಕೆಯಾಗಿದೆ. ಈ ಹಿನ್ನಲೆ ವಿಕೇಂಡ್ ಕರ್ಪ್ಯೂ ಜಾರಿ ಮಾಡುವ ಚಿಂತನೆ ಕೂಡ ನಡೆಸಲಾಗಿದೆ ಎನ್ನಲಾಗಿದೆ
ಕೇರಳ, ಮಹಾರಾಷ್ಟ್ರ ದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿದ ಪಾಲಿಕೆ
ಮೂರನೇ ಅಲೆ ಆರಂಭದಲ್ಲೇ ಕೊರೊನಾ ಕಡಿವಾಣಕ್ಕೆ ಬಿಬಿಎಂಪಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ಪೈಕಿ ಕೇರಳ, ಮಹಾರಾಷ್ಟ್ರದಿಂದ ಬಂದವರಿಗೆ ಕೇವಲ ಟೆಸ್ಟ್ ಮಾತ್ರವಲ್ಲ, ಇಂದಿನಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಮೂಲಕ ಆರಂಭದಲ್ಲೇ ಪರಿಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾಗಿದೆ. ಹಾಗಂತ ಇದು 14 ದಿನಗಳ ಕ್ವಾರಂಟೈನ್ ಅಲ್ಲ. ಆರ್ ಟಿ ಪಿ ಸಿ ಆರ್ ವರದಿ ಬರುವವರೆಗೂ ಕ್ವಾರಂಟೈನ್ ಅನಿವಾರ್ಯ ಎಂದು ಪಾಲಿಕೆ ಸೂಚಿಸಿದೆ. ಹೀಗಾಗಿ ನಗರದ ಎಂಟು ಕಡೆ ಕ್ವಾರಂಟೈನ್ ವ್ಯವಸ್ಥೆಯನ್ನೂ ಪಾಲಿಕೆ ಮಾಡಿದೆ.
ಒಟ್ಟು ಎರಡು ರೀತಿ ಕ್ವಾರಂಟೈನ್ ಗೆ ಬಿಬಿಎಂಪಿ ವ್ಯವಸ್ಥೆ ಮಾಡಿಕೊಂಡಿದೆ. ತ್ರಿ ಸ್ಟಾರ್ ಹೋಟೆಲ್ ಗಳಲ್ಲಿ ಪೇ ಕ್ವಾರಂಟೈನ್ ವ್ಯವಸ್ಥೆ ಒಂದು ಕಡೆಯಾದರೆ ಶ್ರಮಿಕ ವರ್ಗದವರಾದ್ರೆ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಅಥವಾ ಪಾಲಿಕೆ ನೀಡುವ ವ್ಯವಸ್ಥೆಯಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಲಭಿಸಲಿದೆ. ಬಸ್ ನಿಲ್ದಾಣ, ರೇಲ್ವೆ ನಿಲ್ದಾಣದಲ್ಲಿ ಹೆಚ್ಚಿನ ನಿಗಾ ಇಡಲು ತೀರ್ಮಾನಿಸಲಾಗಿದೆ. ಕೇರಳ, ಮಹಾರಾಷ್ಟ್ರ ಪ್ರಯಾಣಿಕರು ಕಡ್ಡಾಯ ಟೆಸ್ಟ್ ಮಾಡಿಸಬೇಕು. 72 ಗಂಟೆ ಮುಂಚಿನ ನೆಗೆಟಿವ್ ವರದಿ ತೋರಿಸಿದ್ರೂ ಮತ್ತೊಮ್ಮೆ ಟೆಸ್ಟ್ ಮಾಡಿಸಲೇಬೇಕು ಎಂದು ಪಾಲಿಕೆ ಖಡಕ್ ಸೂಚನೆ ಕೊಟ್ಟಿದೆ. ಇದರ ನಡುವೆ ರಾಜ್ಯದ ಸೋಂಕು ಹರಡುವ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಆರ್ ಟಿ ನಂಬರ್ ಕೊಡ್ತಿದೆ ಭವಿಷ್ಯದ ಅಪಾಯದ ಸೂಚನೆ
ಇನ್ನು ಕಳೆದ ಒಂದು ತಿಂಗಳ ಆರ್ ಟಿ ನಂಬರ್ ಗಮನಿಸಿದರೆ ಮೂರನೇ ಅಲೆ ಬಂದೇ ಬಿಡ್ತಾ ಅನ್ನೋ ಗುಮಾನಿ ಹುಟ್ಟಿದೆ. ಜುಲೈ ತಿಂಗಳಿನಲ್ಲಿ ಕರ್ನಾಟಕದ ಖಖಿ ನಂಬರ್ ಗಣನೀಯವಾಗಿ ಹೆಚ್ಚಳವಾಗಿದೆ. ಖಖಿ ನಂಬರ್ ಅಂದರೆ ರೀ ಪ್ರೊಡಕ್ಟೀವ್ ನಂಬರ್. ಅಂದರೆ ಒಬ್ಬರಿಂದ ಸೋಂಕು ಎಷ್ಟು ಮಂದಿಗೆ ಹರಡುತ್ತಿದೆ ಎನ್ನುವುದರ ಸೂಚ್ಯಂಕ. ರಾಜ್ಯದ ಈ ಸೂಚ್ಯಂಕ ಜುಲೈ ಅಂತ್ಯಕ್ಕೆ 1. 11 ಕ್ಕೆ ಏರಿಕೆಯಾಗಿದೆ. ಅಂದರೆ 100 ಜನರಿಗೆ ಸೋಂಕು ತಗುಲಿದೆ ಅವರಿಂದ 110 ಮಂದಿಗೆ ಸೋಂಕು ಹರಡುತ್ತಿದೆ. ಜುಲೈ ಮೊದಲ ವಾರದಲ್ಲಿ ರಾಜ್ಯದಲ್ಲಿ ಖಖಿ ನಂಬರ್ 0.68 ಇತ್ತು. ಜುಲೈ ಎರಡನೇ ವಾರದ ವೇಳೆ ಖಖಿ ನಂಬರ್ 0.72 ಗೆ ಹೆಚ್ಚಳ ಕಂಡಿದೆ. ಜುಲೈ ಮೂರನೇ ವಾರದ ವೇಳೆ 0.88 ಗೆ ಏರಿಯಾಗಿದ್ದ ಖಖಿ ನಂಬರ್, ಆಗಸ್ಟ್ ತಿಂಗಳ ಆರಂಭಕ್ಕೆ 1.11 ಗೆ ಏರಿಕೆಯಾಗಿದೆ.ಒಂದೇ ತಿಂಗಳಲ್ಲಿ ಒಂದರ ಗಡಿ ದಾಟಿ ಖಖಿ ನಂಬರ್ ದಾಖಲಾಗಿದೆ. ಎರಡನೇ ಅಲೆ ವೇಳೆಯೂ ಸುಮಾರು ಒಂದು ತಿಂಗಳ ಅವಧಿಯಲ್ಲೇ ಒಂದರ ಗಡಿ ದಾಟಿ ಈ ಸೂಚ್ಯಂಕ ದಾಖಲಾಗಿತ್ತು. ಜನರ ಓಡಾಟ ಚಟುವಟಿಕೆ ಹೆಚ್ಚಳವಾಗಿರುವ ಬೆನ್ನಲ್ಲೇ ಹರಡುವಿಕೆ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದ ಅಕ್ಕಪಕ್ಕದ ಮೂರು ರಾಜ್ಯದಲ್ಲಿ ಹರಡುವಿಕೆ ಪ್ರಮಾಣ ಹೆಚ್ಚಳವಾಗಿರೋದು ರಾಜ್ಯಕ್ಕೂ ಆತಂಕ ಮೂಡಿಸಿದೆ. ಎರಡನೇ ಅಲೆ ಸೋಂಕು ಪೂರ್ಣ ಇಳಿಕೆ ಆಗುವ ಜೊತೆಯಲ್ಲೇ ಮೂರನೇ ಅಲೆ ಮುನ್ಸೂಚನೆಯೂ ಈ ಮೂಲಕ ಸಿಕ್ಕಂತಾಗಿದೆ.