Select Your Language

Notifications

webdunia
webdunia
webdunia
webdunia

ಈಶ್ವರಪ್ಪಗೆ ನಿಂಬೆ ಹಣ್ಣು ಕೊಡ್ತೀನಿ ಎಂದ ಸಚಿವ ಯಾರು?

ಈಶ್ವರಪ್ಪಗೆ ನಿಂಬೆ ಹಣ್ಣು ಕೊಡ್ತೀನಿ ಎಂದ ಸಚಿವ ಯಾರು?
ಹಾಸನ , ಶುಕ್ರವಾರ, 12 ಏಪ್ರಿಲ್ 2019 (20:02 IST)
ಬಿ.ಎಸ್.ಯಡಿಯೂರಪ್ಪ ಅಂಡ್ ಡ್ರಾಮಾ ಕಂಪನಿ ಈ ಬಾರಿ ಕರ್ನಾಟಕದಲ್ಲಿ ಕ್ಲೋಸ್ ಆಗಲಿದೆ. ಹೀಗಂತ ಸಚಿವ ರೇವಣ್ಣ ಟೀಕೆ ಮಾಡಿದ್ದಾರೆ.

ಕೆ.ಎಸ್.ಈಶ್ವರಪ್ಪ ಲಘು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಡಿ.ರೇವಣ್ಣ, ಅವನಿಗೆ ಏನಾಗಿದೆಯೋ ಗೊತ್ತಿಲ್ಲ, ಒಂದು ಒಳ್ಳೇ ನಿಂಬೆ ಹಣ್ಣು ಕೊಡೋಣ ಎಂದು ಲೇವಡಿ ಮಾಡಿದ್ದಾರೆ.
ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾನು ರೌಡಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಮನೆಗೆ ಕಳಿಸಲು ಜನ ತೀರ್ಮಾನ ಮಾಡಿದ್ದಾರೆ ಎಂದರು.
ದೇವೇಗೌಡರು ದಲಿತ ಸಮಾಜಕ್ಕೆ ಸಾಕಷ್ಟು‌ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಗೆ ಟೋಪಿ ಹಾಕಿ ಹೋಗಿರೋ ವ್ಯಕ್ತಿಯಿಂದ ನಾನು ದಲಿತರ ಬಗ್ಗೆ ತಿಳಿಯಬೇಕಿಲ್ಲ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬಕ್ಕೆ ಯಾರೂ ಏನೂ ಮಾಡಲು ಆಗಲ್ಲ. ರಾಮನ ಇಟ್ಟಿಗೆ ಕಲೆಕ್ಟ್ ಮಾಡಿ‌ ಈಶ್ವರಪ್ಪ, ಶೆಟ್ಟರ್ ಮನೆ ಕಟ್ಟಿ ಆಯ್ತು ಎಂದು ಛೇಡಿಸಿದ್ರು.

ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಲ್ಲೂ ಪ್ರಜ್ವಲ್ ಗೆ ಅತ್ಯಧಿಕ ಮತ‌ ಸಿಗಲಿವೆ. ಮಂಡ್ಯ, ತುಮಕೂರಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹನುಮಂತಪುರದಲ್ಲಿ ಪುತ್ರನ ಪರ ಪ್ರಚಾರ ನಡೆಸಿ‌ ರೇವಣ್ಣ ಹೇಳಿದ್ರು.

 

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡ್ರ ಮನೆದೇವ್ರ ಮೇಲೆ ಐಟಿ ರೇಡ್