Publish Date: Thu, 18 Apr 2019 (17:39 IST)
Updated Date: Thu, 18 Apr 2019 (17:41 IST)
ಲೋಕಸಭೆ ಚುನಾವಣೆ ವೋಟ್ ಹಾಕಲು ಆಗಮಿಸಿದ್ದ ನಕಲಿ ಮತದಾರರನ್ನು ಬಂಧನ ಮಾಡಲಾಗಿದೆ.
ಬೆಂಗಳೂರಿನ ಜ್ಞಾನ ಭಾರತಿ ಮತಗಟ್ಟೆಯೊಂದರಲ್ಲಿ ಆಂಧ್ರಪ್ರದೇಶದ ಮೂಲದವರನ್ನು ಚುನಾವಣಾಧಿಕಾರಿಗಳ ನಿರ್ದೇಶನದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮತಗಟ್ಟೆಯಲ್ಲಿ ವೋಟ್ ಹಾಕಲು 15 ಮಂದಿ ನಿಂತಿದ್ದರು. ಅವರಲ್ಲಿ ನಕಲಿ ಮತದಾನ ಮಾಡಲು ಬಂದಿದ್ದ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಉಳಿದ 10 ಕ್ಕೂ ಹೆಚ್ಚು ಜನರು ಓಡಿ ಹೋಗಿದ್ದಾರೆ.
ಆಂಧ್ರದಲ್ಲಿ ಮತ ಚಲಾಯಿಸಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬಂದು ಶಾಹಿ ಅಳಿಸಿಕೊಂಡು ನಕಲಿ ಮತದಾನಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಪರಾರಿಯಾದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.