Publish Date: Mon, 08 Apr 2019 (17:23 IST)
Updated Date: Mon, 08 Apr 2019 (18:23 IST)
ಚುನಾವಣೆ ರಣತಂತ್ರ ಬದಲಿಸಲು ಹಾಗೂ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜೆಡಿಎಸ್ ಸಚಿವರು ಹಾಗೂ ಶಾಸಕರ ಗುಪ್ತಸಭೆಯನ್ನು ಸಿಎಂ ನಡೆಸಿದ್ದಾರೆ.
ಜೆಡಿಎಸ್ ಸಚಿವರು, ಶಾಸಕರೊಂದಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಪ್ತ ಸಭೆ ನಡೆಸಿದ್ದಾರೆ.
ಪುತ್ರನ ಗೆಲುವಿಗೆ ನಡೆಸಬೇಕಾದ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಕೆ.ಆರ್.ಎಸ್. ನ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಕ್ಷದ ಪ್ರಮುಖರು ಪಾಲ್ಗೊಂಡಿದ್ರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಗೆ ತಡ ರಾತ್ರಿ ಆಗಮಿಸಿದ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.
ಸುಮಲತಾ ಅಂಬರೀಷ್ ವಿರುದ್ಧ ಪುತ್ರನ ಗೆಲುವಿನ ಬಗ್ಗೆ ಏನೆಲ್ಲಾ ತಂತ್ರಗಾರಿಕೆ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹೋಟೆಲ್ ಒಳಗೆ ಪತ್ರಕರ್ತರ ಪ್ರವೇಶಕ್ಕೆ ತಡೆ ಒಡ್ಡಲಾಗಿತ್ತು.