Publish Date: Mon, 08 Apr 2019 (17:13 IST)
Updated Date: Mon, 08 Apr 2019 (17:23 IST)
ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ದಿನಕ್ಕೊಂದು ಕದನ ಕುತೂಹಲಕ್ಕೆ ಸಾಕ್ಷಿಯಾಗುತ್ತಿರುವ ಮಂಡ್ಯ ಕ್ಷೇತ್ರದ ಬಗ್ಗೆ ಸಿಎಂಗೆ ಆತಂಕ ಕಾಡುತ್ತಿದೆಯಾ?
ಮಂಡ್ಯದ ಬಗ್ಗೆ ಸಿಎಂಗೆ ಯಾವ ಹಾಗೂ ಏನೂ ಆತಂಕ ಇಲ್ಲ. ಎಂಟು ಜನರು ಶಾಸಕರು ಇರೋದ್ರಿಂದ ಅವರಿಗೇನೂ ಆತಂಕ ಇಲ್ಲ. ಹೀಗಂತ ಸಿಎಂ ಪುತ್ರ ಹಾಗೂ ಮಂಡ್ಯದಲ್ಲಿನ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಹೇಳಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದಿರೋ ಹಲ್ಲೆ ಕುರಿತು ಕಂಪ್ಲೇಟ್ ಆಗಿರೋ ಬಗ್ಗೆ ಮಾಹಿತಿ ಇಲ್ಲ ಎಂದರು.
ಇನ್ನು KRS ಸಿಎಂ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಲ್ಲೆಯ ಎಂಟು ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಬಹುಶಃ ನಾಳೆಯಿಂದ ಮಂಡ್ಯದಲ್ಲಿ ಪ್ರಚಾರ ನಡೆಸೋ ಸಾಧ್ಯತೆ ಇದೆ. ಬೇರೆ ಕಡೆನೂ ಪ್ರಚಾರ ಮಾಡೋದು ಇದೆ ಅಲ್ಲಿ ಮುಗಿಸಿ ಇಲ್ಲಿಗೆ ಬರ್ತಾರೆ ಎಂದರು.