Photo Credit: X
ಬೆಂಗಳೂರು: ಇನ್ನೇನು 2024 ಕ್ಕೆ ಗುಡ್ ಬೈ ಹೇಳಿ 2025 ರನ್ನು ಸ್ವಾಗತಿಸುವ ಸಮಯ ಬಂದಿದೆ. ಕೆಲವೇ ಗಂಟೆಗಳಲ್ಲಿ 2024 ರ ವರ್ಷ ಮುಗಿದು ಹೋಗಲಿದೆ. ಹೀಗಾಗಿ ಇಂದು ಮಧ್ಯರಾತ್ರಿ ಹೊಸ ವರ್ಷ ಆಚರಿಸಲು ಹಲವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಹೊಸ ವರ್ಷದ ನಿಮಿತ್ತ ಶಾಲೆ, ಕಚೇರಿಗೆ ರಜೆ ಹಾಕಿಕೊಂಡು ಫ್ಯಾಮಿಲಿ ಸಮೇತ ಟ್ರಿಪ್ ಮಾಡಲು ಹಲವರು ಯೋಜನೆ ಹಾಕಿದ್ದಾರೆ. ಈ ವೀಕೆಂಡ್ ನಿಂದಲೇ ಪ್ರವಾಸೀ ತಾಣಗಳಲ್ಲಿ ಅತೀವ ರಷ್ ಕಂಡುಬರುತ್ತಿದೆ.
ಇದೀಗ ಹೊಸ ವರ್ಷಾಚರಣೆ ಮಾಡಲು ಜನ ಗೋವಾ, ಮಡಿಕೇರಿ, ಚಿಕ್ಕಮಗಳೂರಿನಂತಹ ಪ್ರವಾಸೀ ತಾಣಗಳತ್ತ ಹೋಗುತ್ತಿದ್ದಾರೆ. ಚಳಿ, ಮೋಡ ಮುಸುಕಿದ ವಾತಾವರಣವಿರುವುದರಿಂದ ಮಡಿಕೇರಿ ಹೆಚ್ಚಿನವರ ಫೇವರಿಟ್ ತಾಣವಾಗಿದೆ.
ಆದರೆ ಮಡಿಕೇರಿಗೆ ತೆರಳಲು ಹೊರಟ ಯಾತ್ರಿಕರಿಗೆ ಶಾಕ್ ಸಿಕ್ಕಿದೆ. ಹೊಸ ವರ್ಷದ ನಿಮಿತ್ತ ಹಲವರು ಮಡಿಕೇರಿಗೆ ಹೋಗುತ್ತಿರುವುದರಿಂದ ಇಲ್ಲಿನ ರೆಸಾರ್ಟ್, ಹೋಂ ಸ್ಟೇಗಳು ಭರ್ತಿಯಾಗಿವೆ. ರೂಂ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿಯಿದೆ. ಕೆಲವೆಡೆ ರೂಂಗಳಿದ್ದರೂ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಹೊಸ ವರ್ಷದ ನಿಮಿತ್ತ ಮಡಿಕೇರಿಯತ್ತ ತೆರಳುವವರು ಮೊದಲೇ ಬುಕಿಂಗ್ ಮಾಡಿಯೇ ತೆರಳುವುದು ಉತ್ತಮ.