Publish Date: Fri, 03 Aug 2018 (14:37 IST)
Updated Date: Fri, 03 Aug 2018 (14:40 IST)
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ. ಅಖಂಡ ಕರ್ನಾಟಕದ ವಿಭಜನೆ ಕುರಿತ ಮಾತನಾಡುವುದೇ ಪಾಪದ ಕೆಲಸ ಅಂತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಮಾತನಾಡಿದ್ರು. ಉ-ಕ ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಇನ್ನಷ್ಟು ಆಗಬೇಕಿದೆ. ಅದಕ್ಕೆ ಪಕ್ಷಗಳ, ಜನರ ಸಹಕಾರ ಮುಖ್ಯ. ಉತ್ತರ ಕರ್ನಾಟಕದಲ್ಲಿನ ಬಡತನ, ನಿರುದ್ಯೋಗ ನೀಗಬೇಕಿದೆ. ಅಭಿವೃದ್ಧಿಗೆ ಬಿಡುಗಡೆಯಾದ ಹಣ ಸೂಕ್ತ ರೀತಿಯಲ್ಲಿ ಉಪಯೋಗವಾಗಬೇಕು ಎಂದರು.
ಹೈ - ಕ ಅಭಿವೃದ್ಧಿ ಗೆ 371ಜೆ ಅನುಷ್ಠಾನಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದೆವು. ಬಿಜೆಪಿಯವರು ಏಕೆ ತರಲಿಲ್ಲ ಅಂತ ಬಿಜೆಪಿಗರಿಗೆ ಟಾಂಗ್ ಕೊಟ್ರು. ಪ್ರಗತಿಗೆ ಪಕ್ಷಭೇದವಿಲ್ಲ. ಉ-ಕ ಅಭಿವೃದ್ಧಿ ಗೆ ಸಿಎಂ ಕೆಲವು ಉತ್ತಮ ವಿಚಾರಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಸಿಎಂ ಜೊತೆ ಪ್ರಗತಿಪರ ಕರ್ನಾಟಕ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.