Publish Date: Sun, 29 Jul 2018 (14:42 IST)
Updated Date: Sun, 29 Jul 2018 (14:47 IST)
ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಕೇವಲ ಮೂರು-ನಾಲ್ಕು ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಿದೆ ಬಿಜೆಪಿ ನಾಯಕಿ ಆರೋಪಿಸಿದ್ದಾರೆ.
ಕಳೆದ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರ ಧರ್ಮವನ್ನು ಒಡೆಯುವ ಕೆಲಸ ಮಾಡಿದರೆ ಈಗಿನ ಸರಕಾರ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರು ನಮ್ಮ ನಾಡು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಕೇವಲ 32 ಕ್ಷೇತ್ರಗಳಿಗೆ ಮುಖ್ಯಮಂತ್ರಿಯಲ್ಲ, ರಾಜ್ಯದ 224 ಕ್ಷೇತ್ರಗಳಿಗೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬಾರದು.
ಕನ್ನಡ ಕಟ್ಟುವುದಕ್ಕೆ ನಮ್ಮ ಪೂರ್ವಜರು 70 ವರ್ಷಗಳಿಂದ ಶ್ರಮಪಟ್ಟ ಪರಿಣಾಮ ಕನ್ನಡ ನಾಡನ್ನು ಕಟ್ಟಿದ್ದಾರೆ.
ಯಾವುದೇ ರೀತಿಯಿಂದ ಉತ್ತರ ಕರ್ನಾಟಕವನ್ನು ಒಡೆಯುವುದಕ್ಕೆ ನಾವು ಬಿಡುವದಿಲ್ಲ ಎಂದಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿ ಪಕ್ಷ ಬಲಪಡಿಸಲು ಪ್ರಯತ್ನ ಮಾಡುತ್ತೇವೆ. ರಾಜ್ಯದ ಲ್ಲಿ ಮೂರು ತಂಡಗಳನ್ನಾಗಿ ವಿಭಾಗಿಸಿ ಪ್ರಚಾರ ಮಾಡಲಾಗುವುದು ಎಂದರು.