ಗೋವಾ : ಗೋ ಹತ್ಯೆದ ವಿರುದ್ಧ ಬಿಜೆಪಿ ಸರ್ಕಾರ ಹೋರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಗೋವಾದಲ್ಲಿ ಗೋಮಾಂಸದ ಕೊರತೆಯಾಗಿದೆ ಎಂದು ಗೋವಾ ಬಿಜೆಪಿ ಶಾಸಕ, ಉಪಸ್ಪೀಕರ್ ಮೈಕಲ್ ಲೋಬೋ ಅವರು ತಮ್ಮ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
									
			
			 
 			
 
 			
					
			        							
								
																	
ಗೋವಾದ ಪ್ರವಾಸೋದ್ಯಮದ ಹೃದಯ ಎಂದು ಕರೆಯಲಾಗಿರುವ ಕ್ಯಾಲಂಗುಟೆ ಕ್ಷೇತ್ರದ ಶಾಸಕರಾದ ಮೈಕಲ್ ಲೋಬೋ ಅವರು ಗೋವಾದಲ್ಲಿ ಅನೇಕರು ಗೋಮಾಂಸ ಸೇವಿಸುತ್ತಾರೆ. ಗೋಮಾಂಸ ತಿನ್ನಲೆಂದೇ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಆದರೆ, ಈಗ ಗೋಮಾಂಸದ ಕೊರತೆ ಉಂಟಾಗಿದೆ ಎಂದು ಹೇಳಿದ್ದಾರೆ.
									
										
								
																	
ಹಾಗೇ ಗೋ ರಕ್ಷಕರು ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ವ್ಯಾಪಾರಸ್ಥರು ಸೇರಿದಂತೆ ಜನತೆಗೆ ಬೆದರಿಕೆ ಹಾಕುತ್ತಿದ್ದಾರೆ. ಕೆಲವರು ಗೋ ರಕ್ಷಕರೆಂದು ಹೇಳಿಕೊಂಡು ರಾಜ್ಯದ ಗಡಿಯಲ್ಲಿ ನಿಂತು, ಗೋಮಾಂಸವನ್ನು ತಡೆಯುತ್ತಿದ್ದಾರೆ. ರಾಜ್ಯದಲ್ಲಿ ಮಾಂಸದ ಅಂಗಡಿಗಳು ಮುಚ್ಚುತ್ತಿವೆ. ಇದನ್ನು ತಡೆಯುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ತಮ್ಮ ಸರಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
									
											
									
			        							
								
																	
ಅಲ್ಲದೇ ನಾನು ಗೋ ರಕ್ಷಕರನ್ನು ಗೌರವಿಸುತ್ತೇನೆ. ಆದರೆ, ಗೋವಾದಲ್ಲಿ ಗೋಮಾಂಸ ಸೇವಕರು ಜಾಸ್ತಿ ಇದ್ದಾರೆ. ಇವರನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಲೋಬೋ ಅವರು,ಈ ಬಗ್ಗೆ ಉತ್ತರ ನೀಡಬೇಕೆಂದು  ಸಿಎಂ ಮನೋಹರ್ ಪರಿಕ್ಕರ್ ಅವರನ್ನು ಒತ್ತಾಯಿಸಿದ್ದಾರೆ.
									
			                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ