ಲಂಡನ್ : ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಶತಮಾನಗಳಿಂದ ಯಾರು ಭೇದಿಸಲಾಗದ ಬರ್ಮುಡಾ ತ್ರಿಕೋನದ ರಹಸ್ಯವನ್ನು ಇದೀಗ ಬ್ರಿಟಿಷ್ ವಿಜ್ಞಾನಿಗಳು ಭೇದಿಸಿದ್ದಾರೆ.
ಅಟ್ಲಾಂಟಿಕ್ ಮಹಾಸಾಗರದ ಫ್ಲೋರಿಡಾದಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶದ ನಡುವಣ ತ್ರಿಕೋನಾಕೃತಿಯ ಭಾಗವೇ ಈ ಬರ್ಮುಡಾ ಟ್ರಯಾಂಗಲ್. ಈ ಪ್ರದೇಶದಲ್ಲಿ ಹಾದುಹೋಗುವ ವಿಮಾನಗಳು ಇದ್ದಕ್ಕಿದ್ದಂತೇ ನಾಪತ್ತೆಯಾಗುವುದಲ್ಲದೆ ಹಡಗುಗಳು ಅಪಘಾತಕ್ಕೀಡಾಗುವುದು. ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಇದು ಆಹುತಿ ತೆಗೆದುಕೊಂಡಿದೆ. ಇದರ ರಹಸ್ಯವನ್ನು ಭೇದಿಸಲು ಹಲವು ವಿಜ್ಞಾನಿಗಳು ಬಂದರೂ ಕೂಡ ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಆದರೆ ಇದೀಗ ಈ ಭೌಗೋಳಿಕ ರಹಸ್ಯವನ್ನು ಕೊನೆಗೂ ಭೇದಿಸಲಾಗಿದೆ ಎಂದು ಚಾನೆಲ್ 5 ತನ್ನ ಡಾಕ್ಯುಮೆಂಟರಿಯಲ್ಲಿ ಹೇಳಿಕೊಂಡಿದೆ.
ಚಾನೆಲ್ 5ನಲ್ಲಿ ದಿ ಬರ್ಮುಡಾ ಟ್ರ್ಯಾಂಗಲ್ ಎನಿಗ್ಮಾ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿರುವ ಸೌತಾಂಪ್ಟನ್ ಯುನಿವರ್ಸಿಟಿಯ ತಜ್ಞರು ಈ ರಾಕ್ಷಸ ಅಲೆಗಳನ್ನು ನೈಸರ್ಗಿಕ ವಿದ್ಯಮಾನ ಎಂದು ಬಣ್ಣಿಸಿದ್ದಾರೆ. ಜತೆಗೆ ಸಿಮ್ಯುಲೇಟರ್‌ಗಳನ್ನು ಉಪಯೋಗಿಸಿ ಕೊಂಡು ದೈತ್ಯ ನೀರಿನ ಅಲೆಗಳನ್ನು ಮರುಸೃಷ್ಟಿ ಮಾಡಿ ವಿವರಣೆ ನೀಡಿದ್ದಾರೆ.
ಈ ದೈತ್ಯ ಅಲೆಗಳು ಕೆಲ ನಿಮಿಷಗಳಷ್ಟು ಹೊತ್ತು ಮಾತ್ರ ಇರುತ್ತವೆ. ಕೆಲವೊಂದು 100 ಅಡಿಗಳಷ್ಟು ಎತ್ತರಕ್ಕೂ ಬರುತ್ತವೆ. ಇದನ್ನು 1997ರಲ್ಲಿ ಮೊದಲ ಬಾರಿಗೆ ಉಪಗ್ರಹದ ಮೂಲಕ ಪತ್ತೆ ಮಾಡಲಾಗಿದೆ. ದಕ್ಷಿಣ ಮತ್ತು ಉತ್ತರದಿಂದ ಹಾಗೂ ಇದರೊಂದಿಗೆ ಫ್ಲೋರಿಡಾ ದಿಂದ ಬಿರುಗಾಳಿ ಒಟ್ಟಿಗೆ ಬರುವುದರಿಂದಾಗಿ ರಾಕ್ಷಸ ಸ್ವರೂಪ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ