Select Your Language

Notifications

webdunia
webdunia
webdunia
webdunia

ಬ್ರಿಟನ್ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಮರೆತ ಡೊನಾಲ್ಡ್ ಟ್ರಂಪ್ ಮಾಡಿದ್ದೇನು ಗೊತ್ತೇ?

ಬ್ರಿಟನ್  ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಮರೆತ ಡೊನಾಲ್ಡ್ ಟ್ರಂಪ್ ಮಾಡಿದ್ದೇನು ಗೊತ್ತೇ?
ಲಂಡನ್ , ಭಾನುವಾರ, 15 ಜುಲೈ 2018 (06:58 IST)
ಲಂಡನ್ : ಬ್ರಿಟನ್ ಪ್ರವಾಸದಲ್ಲಿದ್ದ ಸಂದರ್ಭವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಪ್ರವಾಸದ ವೇಳೆ ಬ್ರಿಟನ್ ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಡೆದಿರುವ ಘಟನೆಯೊಂದಕ್ಕೆ ಇದೀಗ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


ಹೌದು. ಶುಕ್ರವಾರ ಟ್ರಂಪ್ ದಂಪತಿಗಳು ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಹಲವು ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಾಮಾನ್ಯವಾಗಿ ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಿಗದಿತ ಪ್ರದೇಶಕ್ಕೆ ರಾಣಿಗಿಂತಲೂ ಮುಂಚಿತವಾಗಿ ಆಗಮಿಸಬೇಕಾಗುತ್ತದೆ, ಆದರೆ ಟ್ರಂಪ್ ಬ್ರಿಟನ್ ರಾಣಿಯನ್ನೇ ತಮಗಾಗಿ ಕಾಯಿಸಿದ್ದಾರೆ. ಇಷ್ಟೇ ಅಲ್ಲದೇ ಸ್ವಾಗತ ಸಮಾರಂಭದಲ್ಲಿ ರಾಣಿಯನ್ನು ಬಿಟ್ಟು ತಾವೇ ಮುಂದೆ ನಡೆದು ಹೋಗುವುದರ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ ಯತ್ನ ಶಂಕೆ: ಥಳಿತ