Publish Date: Mon, 25 Jun 2018 (12:10 IST)
Updated Date: Mon, 25 Jun 2018 (12:14 IST)
ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ನ್ಯೂರೋಎಂಡೋಕ್ರೈನ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಈಗಾಗಲೇ ಲಂಡನ್ ಗೆ ಕೂಡ ತೆರಳಿದ್ದಾರೆ. ಇಂತಹ ನೋವಿನ ಪರಿಸ್ಥಿತಿಯಲ್ಲಿರುವ ಇರ್ಫಾನ್ ಖಾನ್ ಅವರಿಗೆ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರು ಸಹಾಯ ಮಾಡಿದ್ದಾರಂತೆ.
ನಟ ಇರ್ಫಾನ್ ಖಾನ್ ಅವರಿಗೆ ತುಂಬಾ ಹತ್ತಿರವಾಗಿರುವವರೆಂದರೆ ಅದು ನಟ ಶಾರುಕ್ ಖಾನ್. ಅವರನ್ನು ಲಂಡನ್ ಗೆ ಹೋಗುವ ಮೊದಲು ಇರ್ಫಾನ್ ಖಾನ್ ಅವರು ಮನೆಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ಶಾರುಕ್ ಲಂಡನ್ ನಲ್ಲಿರುವ ತಮ್ಮ ಮನೆ ಕೀ ಯನ್ನು ಇರ್ಫಾನ್ ಅವರಿಗೆ ನೀಡಿದ್ದರು. ಇರ್ಫಾನ್ ಅವರು ನಿರಾಕರಿಸಿದ್ರೂ ಕೂಡ ಶಾರುಕ್ಖಾನ್ ಅವರು ಒತ್ತಾಯ ಮಾಡಿ ಕೀ ಕೊಟ್ಟಿದ್ದರು ಎನ್ನಲಾಗಿದೆ. ಲಂಡನ್ ನಲ್ಲಿರುವ ನನ್ನ ಮನೆಯಲ್ಲಿ ಇರ್ಫಾನ್ ಕುಟುಂಬ ವಾಸವಾಗ್ಲಿ ಎನ್ನುವ ಕಾರಣಕ್ಕೆ ಶಾರುಕ್ ಖಾನ್ ಹೀಗೆ ಮಾಡಿದ್ದರಂತೆ. ಈ ಎಲ್ಲ ಸಂಗತಿಯನ್ನು ಸ್ವತಃ ಇರ್ಫಾನ್ ಖಾನ್ ಅವರೇ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ