Publish Date: Sun, 24 Jun 2018 (15:17 IST)
Updated Date: Sun, 24 Jun 2018 (15:20 IST)
ಬೆಂಗಳೂರು : ಆ ಕರಾಳ ರಾತ್ರಿ ಸಿನಿಮಾದ ಹಾಡೊಂದರ ಕುರಿತಾಗಿ ನಿರ್ದೇಶಕ ದಯಾಳ್ ಹಾಗೂ ಲಹರಿ ಸಂಸ್ಥೆ ಮಧ್ಯೆ ವಿವಾದ ಶುರುವಾಗಿದೆ.
ದಯಾಳ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ‘ಆ ಕರಾಳ ರಾ’ತ್ರಿ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಜೆಕೆ ಹಾಗೂ ಅನುಪಮ ಗೌಡ ನಟಿಸಿದ್ದರು. ಆದರೆ ಈ ಸಿನಿಮಾದಲ್ಲಿ ಮಂಕು ತಿಮ್ಮನ ಕಗ್ಗ ಹಾಡನ್ನು ಬಳಸಿಕೊಳ್ಳಲಾಗಿತ್ತು. ಆದರೆ ಮಂಕು ತಿಮ್ಮನ ಕಗ್ಗದ ಹಕ್ಕು ಸಂಪೂರ್ಣವಾಗಿ ಲಹರಿ ಸಂಸ್ಥೆಯದ್ದು ಸಿನಿಮಾಗೆ ಅನುಮತಿ ಇಲ್ಲದೆ ಬಳಸಿಕೊಂಡಿರುವುದು ತಪ್ಪು ಎಂದು ಲಹರಿ ಸಂಸ್ಥೆಯ ಆನಂದ್ ದೂರುತಿದ್ದಾರೆ ಎಂದು ನಿರ್ದೇಶಕ ದಯಾಳ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ