Select Your Language

Notifications

webdunia
webdunia
webdunia
webdunia

ನೀವು ಅತಿಯಾಗಿ ತಿನ್ನಲು ಬಯಸುವ ವಸ್ತುವಿನಿಂದ ದೇಹದ ಸಮಸ್ಯೆ ತಿಳಿಯಬಹುದಂತೆ

ನೀವು ಅತಿಯಾಗಿ ತಿನ್ನಲು ಬಯಸುವ ವಸ್ತುವಿನಿಂದ ದೇಹದ ಸಮಸ್ಯೆ ತಿಳಿಯಬಹುದಂತೆ
ಬೆಂಗಳೂರು , ಭಾನುವಾರ, 24 ಜೂನ್ 2018 (07:40 IST)
ಬೆಂಗಳೂರು : ನಾವು ಯಾವುದಾದರೂ ಒಂದು ವಸ್ತುವನ್ನು ಅತೀ ಹೆಚ್ಚು ತಿನ್ನಲು ಬಯಸುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮ ನಾಲಿಗೆ ಅಲ್ಲ, ನಮ್ಮ ಶರೀರ. ನಮ್ಮ ಶರೀರದಲ್ಲಿ ಉಪ್ಪು, ಹುಳಿ, ಖಾರ  ಇತ್ಯಾದಿ ಯಾವುದಾದರೊಂದು ಅಂಶ ಕಡಿಮೆ ಇದ್ದಾಗ, ಅದನ್ನು ತಮ್ಮ ದೇಹ ಈ ರೀತಿ ತಿಳಿಸುತ್ತಂತೆ. ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.

*ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ, ನಿಮ್ಮ ದೇಹದಲ್ಲಿ ಕ್ರೋಮಿಯಂ ಅಂಶ ಕಡಿಮೆಯಿದೆ ಎಂದು ಅರ್ಥ.

*ಚಾಕೋಲೆಟ್ ತಿನ್ನುವ ಬಯಕೆ ಶುರುವಾದರೆ, ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ.

*ಉಪ್ಪು ಅಥವಾ ಉಪ್ಪಿನಂಶದ ತಿಂಡಿ ಬಯಸಿದರೆ ಸೋಡಿಯಂ ಕಡಿಮೆಯಾಗಿದೆ ಎಂಬುದು ಸ್ಪಷ್ಟ.

*ಕಬ್ಬಿಣದ ಅಂಶ ಕಡಿಮೆ ಇದ್ದರೆ ನಾಲಿಗೆ ಮಾಂಸದ ಆಹಾರ ಸೇವಿಸಲು ಇಚ್ಛಿಸುತ್ತದೆ.

*ಮಸಾಲೆಯುಕ್ತ ಪದಾರ್ಥ ತಿನ್ನುವಂತಾದರೆ, ನಿಮ್ಮ ಹೊಟ್ಟೆಯಲ್ಲೇನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕ ಮಕ್ಕಳ ತಲೆಗೆ ಪೆಟ್ಟಾಗಿ ಗುಳ್ಳೆ ಬಂದರೆ ತಕ್ಷಣ ಕಡಿಮೆ ಮಾಡಲು ಇದನ್ನು ಹಚ್ಚಿ