Publish Date: Sat, 23 Jun 2018 (14:25 IST)
Updated Date: Sat, 23 Jun 2018 (14:29 IST)
ಬೆಂಗಳೂರು : ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಿ ವಿಲನ್’ ಚಿತ್ರದ ಸಾಂಗ್ ವೊಂದರ ಲಿರಿಕ್ಸ್ ಕುರಿತು ಈಗ ಬಾರೀ ಚರ್ಚೆಯಾಗುತ್ತಿದೆ. ಜೊತೆಗೆ ಕನ್ನಡ ಸಿನಿಮಾ ಅಭಿಮಾನಿಗಳ ನಡುವೆ ‘ಬಾಸ್ ಯಾರು?’ ಎಂಬ ವಿಷಯಕ್ಕೆ ಕಿತ್ತಾಟ ಕೂಡ ಶುರುವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್ ಅವರು ‘ಬಾಸ್ ಯಾರು?’ ಎಂಬ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನ ನೀಡಿದ್ದಾರೆ . ಅವರವರ ಮನೆಯಲ್ಲಿ ಅವರುಗಳೇ ಬಾಸ್. ಮೇಲಿರೋನೇ ನಮ್ಮೆಲ್ಲರಿಗೂ ಬಿಗ್ ಬಾಸ್. ಯಶ್ , ದರ್ಶನ್ , ಪುನೀತ್ ಸೇರಿದಂತೆ ಬಾಸ್ ಅಂತ ಯಾರಿಗೆ ಹೇಳಿದ್ರೂ ನನಗೆ ಖುಷಿನೆ . ಯಾಕಂದ್ರೆ ನಾವೆಲ್ಲರೂ ಒಂದೇ . ಈ ಬಾಸ್ ಹೆಸರಿನಲ್ಲಿ ಅಭಿಮಾನಿಗಳು ಯಾವುದೇ ವಿವಾದವನ್ನ ಸೃಷ್ಟಿಸಬಾರದು ಎಂದು ಹೇಳಿದ್ದಾರೆ .
ನಿಮ್ಮ ನಿಮ್ಮ ನೆಚ್ಚಿನ ನಟರೆ ನಿಮಗೆ ಬಾಸ್. ನಿಮ್ಮ ನೆಚ್ಚಿನ ನಟರನ್ನ ಬಾಸ್ ಆಗಿಸುವ ಅಥವಾ ಬಾಸ್ ಎನ್ನುವ ಭರಾಟೆಯಲ್ಲಿ ಮತ್ತೊಬ್ಬ ನಟನ ಬಗ್ಗೆ ಕೇವಲವಾಗಿ ಮಾತನಾಡ ಬೇಡಿ ಎಂದು ಹೇಳುವುದರ ಮೂಲಕ ನಟ ಶಿವರಾಜ್ ಕುಮಾರ್ ಅವರು ಬಾಸ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ