Publish Date: Sat, 23 Jun 2018 (09:47 IST)
Updated Date: Sat, 23 Jun 2018 (09:53 IST)
ಬೆಂಗಳೂರು : ಸಿನಿಮಾ ನಟಿಯರೆಂದ ಮೇಲೆ ಅವರಿಗೆ ಬಿಕಿನಿ ತೊಡುವುದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಇದರಿಂದ ತಮ್ಮ ಗ್ಲಾಮರ್ ಎದ್ದು ಕಾಣುತ್ತದೆ ಎಂಬುದು ಅವರ ಅಭಿಪ್ರಾಯ. ಆದರೆ ಈ ಬಿಕಿನಿ ಬಗ್ಗೆ ಸ್ಯಾಂಡಲ್ ವುಡ್ ನ ನಟಿಯೊಬ್ಬರು ವಿಭಿನ್ನವಾಗಿ ಮಾತನಾಡಿದ್ದಾರೆ.
ಹೌದು. ನಟಿ ಡಿಂಪಲ್ ಕ್ಯೂನ್ ರಚಿತಾ ರಾಮ್ ಅವರು ಗ್ಲಾಮರ್ ಪಾತ್ರಕ್ಕಿಂತ ಹೆಚ್ಚು ಹೋಮ್ಲಿ ಪಾತ್ರಗಳನ್ನೇ ಮಾಡುತ್ತಾ ಬಂದಿರುವ ಕಾರಣ ಅವರು ಇದುವರೆಗೆ ಬಿಕಿನಿ ಹಾಕಿಲ್ಲವಂತೆ. ಹಾಗೇ ಈ ಬಗ್ಗೆ ಮಾತನಾಡಿದ ರಚಿತಾ ರಾಮ್ ಅವರು,’ ಗ್ಲಾಮರ್ ಎಂದರೆ ಅನೇಕರು ಬಿಕಿನಿ ತೊಡುವುದು, ಮೈಮಾಟ ತೋರಿಸುವುದು ಎಂದು ತಿಳಿದಿದ್ದಾರೆ. ಆದರೆ ನನ್ನ ಪ್ರಕಾರ ಗ್ಲಾಮರ್ ಅಂದರೆ ಅದಲ್ಲ. ನನ್ನ ಪ್ರಕಾರ ಗ್ಲಾಮರ್ ಅಂದರೆ ಅಂದವಾಗಿ ಇರುವುದು. ನಾವು ತೊಡುವ ಬಟ್ಟೆಯಲ್ಲಿ ಕಮ್ಫರ್ಟ್ ಆಗಿ ಇರುವುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ