Select Your Language

Notifications

webdunia
webdunia
webdunia
webdunia

ಬಿಸಿ ನೀರಿನಲ್ಲಿ ಸ್ನಾನ ಮಾಡುವ ಪುರುಷರಿಗೆ ಕಾದಿದೆ ಅಪಾಯ. ಕಾರಣ ಇಲ್ಲಿದೆ ನೋಡಿ

ಬಿಸಿ ನೀರಿನಲ್ಲಿ ಸ್ನಾನ ಮಾಡುವ ಪುರುಷರಿಗೆ ಕಾದಿದೆ ಅಪಾಯ. ಕಾರಣ ಇಲ್ಲಿದೆ ನೋಡಿ
ಬೆಂಗಳೂರು , ಶುಕ್ರವಾರ, 22 ಜೂನ್ 2018 (13:46 IST)
ಬೆಂಗಳೂರು : ಹೆಚ್ಚಿನ ಪುರುಷರು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಅಂತವರು ಇನ್ನು ಮುಂದೆ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಯಾಕೆಂದರೆ ಪುರುಷರು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡಿದ್ರೆ ಹಲುವು ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬುದು ಒಂದು ಸಂಶೋಧನಾ ವರದಿಯಿಂದ ತಿಳಿದು ಬಂದಿದೆ.


ನೀವು ಬಿಸಿನೀರಿನಲ್ಲಿ ಸ್ನಾನ ಮಾಡಿದ್ರೆ ಆಗುವ ಪರಿಣಾಮಗಳು :

*ಪುರುಷರ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಪುರುಷರ ವೀರ್ಯಾಣು ಉತ್ಪತ್ತಿಯಾಗುತ್ತದೆ.ಅದರಲ್ಲೂ ಪುರುಷರ ವೃಷಣ ದೇಹದ ಹೊರಭಾಗದಲ್ಲಿದು ಇದಕ್ಕೆ ಬಿಸಿನೀರು ಹೆಚ್ಚಾಗಿ ಬೀಳುವುದರಿಂದ ನಿಮ್ಮ ವೀರ್ಯಾಣು ಉತ್ಪತ್ತಿ ಕಡಮೆಯಾಗುತ್ತದೆ

*ಚಳಿ ಹೆಚ್ಚಿದ್ದಾಗ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಕಂಡುಬರುತ್ತವೆ. ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ.

*ಚರ್ಮ ಸೀಳಬಹುದು. ಅಂದರೆ ನಿಮ್ಮ ಚರ್ಮದಲ್ಲಿ ಸೂಕ್ಷ್ಮ ರಂದ್ರಗಳಿದು ಅದರಲ್ಲಿ ಬಿಸಿನೀರು ಹೋದಾಗ ನಿಮ್ಮ ಚರ್ಮ ಒಣಗುತ್ತದೆ.ನಿಮ್ಮ ಸೌಂದರ್ಯ ಕುಗ್ಗಿಸುತ್ತದೆ.

* ಮದ್ಯಪಾನ ಮತ್ತು ಇನ್ನಿತರ ಚಟಗಳಿರುವ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹಲವು ರೀತಿಯ ಖಾಯಿಲೆಗಳು ಹೆಚ್ಚಾಗುತ್ತವೆ.

*ಪುರುಷರು ಹೆಚ್ಚಾಗಿ ಪ್ರತಿದಿನ ಬಿಸಿನೀರಿನ ಸ್ನಾನ ಮಾಡುವುದು ಒಳ್ಳೇದಲ್ಲ ಇದರಿಂದ ತಲೆ ನೋವು ಮತ್ತು ತಲೆಸುತ್ತುವುದು ಹೆಚ್ಚಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ಮಾಡಿದ ತಕ್ಷಣ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ