Select Your Language

Notifications

webdunia
webdunia
webdunia
webdunia

ಕೊನೆಗೂ ತನ್ನ ಸೌಂದರ್ಯದ ರಹಸ್ಯ ಬಿಚ್ಚಿಟ್ಟ ನಟಿ ಸುಮನ್ ರಂಗನಾಥ್

ಕೊನೆಗೂ ತನ್ನ ಸೌಂದರ್ಯದ ರಹಸ್ಯ ಬಿಚ್ಚಿಟ್ಟ ನಟಿ ಸುಮನ್ ರಂಗನಾಥ್
ಬೆಂಗಳೂರು , ಸೋಮವಾರ, 30 ಜುಲೈ 2018 (12:46 IST)
ಬೆಂಗಳೂರು : 90ರ ದಶಕದ ಕನ್ನಡದ ಖ್ಯಾತ ನಟಿಯರಲ್ಲಿ ಸುಮನ್ ರಂಗನಾಥ್ ಕೂಡಾ ಒಬ್ಬರು. ಇವರು ಕನ್ನಡದ ಖ್ಯಾತ ನಟರಾದ ಶಂಕರ್ ನಾಗ್, ವಿಷ್ಣುವರ್ಧನ್ ಮುಂತಾದವರ ಜೊತೆ ನಾಯಕಿಯಾಗಿ ನಟಿಸಿದ್ದರು.


ನಟಿ ಸುಮನ್ ರಂಗನಾಥ್ ಅವರ ಸಮಕಾಲೀನ ನಟಿಯರು ಇಂದು ಪೋಷಕರ ಪಾತ್ರದಲ್ಲಿ ನಟಿಸುತ್ತಿದ್ದರೇ ಇವರು ಮಾತ್ರ ಇಂದಿಗೂ ನಾಯಕಿಯರಲ್ಲಿ ಒಬ್ಬರಾಗಿ ನಟಿಸುತ್ತಿದ್ದಾರೆ. ಇವರು ಬುದ್ಧಿವಂತ, ನಾನವನಲ್ಲ, ಸಿದ್ಲಿಂಗು, ನೀರ್ದೋಸೆ ಚಿತ್ರದಲ್ಲಿ ನಟಿಸಿದ್ದರು.


1974ರಲ್ಲಿ ಜನಿಸಿದ ಇವರಿಗೆ ಈಗ 44 ವರ್ಷವೆಂದರೆ ಯಾರು ನಂಬಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮ ಸೌಂದರ್ಯವನ್ನು, ಫಿಟ್ ನೆಸ್ ನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಅವರ ಸೌಂದರ್ಯದ ಗುಟ್ಟನ್ನು ತಿಳಿದುಕೊಳ್ಳಲು ಹಲವರು ಕಾಯುತ್ತಿದ್ದಾರೆ.


ಇದೀಗ ಸುಮನ್ ರಂಗನಾಥ್ ಅವರೇ ಸಂದರ್ಶನವೊಂದರಲ್ಲಿ ತಮ್ಮ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ‘ನನ್ನ ಸೌಂದರ್ಯದ ಗುಟ್ಟಿಗೆ ಕಾರಣ ನಾನು ಬೆಳೆದು ಬಂದ ಪರಿಸರ. ಜತೆಗೆ ನನ್ನ ಜೀವನ ಶೈಲಿ. ನಾನು ಹೆಚ್ಚಾಗಿ ನೆಗೆಟಿವ್ ಆಗಿ ಯೋಚಿಸಲ್ಲ. ನಿತ್ಯ ಯೋಗ ಮಾಡುತ್ತೇನೆ. ಕೆಟ್ಟ ಅಭ್ಯಾಸಗಳಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ದೆ ಮಾಡುವುದನ್ನು ತಪ್ಪಿಸಲ್ಲ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ಶ್ರದ್ಧೆ ತೋರುತ್ತೇನೆ. ಇವಿಷ್ಟನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುವುದೇ ನನ್ನ ಸೌಂದರ್ಯದ ಗುಟ್ಟು’ ಎಂದು ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಚೋಪ್ರಾ ಈ ನಡವಳಿಕೆ ಹಲವರಲ್ಲಿ ಗೊಂದಲ ಉಂಟುಮಾಡಿದೆಯಂತೆ!