Select Your Language

Notifications

webdunia
webdunia
webdunia
Friday, 11 April 2025
webdunia

ವಿಷ್ಣುವರ್ಧನ್ ಸಮಾಧಿಯ ಅಭಿವೃದ್ಧಿಯ ಕುರಿತು ಸಿಎಂ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ ಹುಚ್ಚ ವೆಂಕಟ್

ವಿಷ್ಣುವರ್ಧನ್
ಬೆಂಗಳೂರು , ಬುಧವಾರ, 30 ಮೇ 2018 (06:30 IST)
ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ  ಸಮಾಧಿಯ ಅಭಿವೃದ್ಧಿಯ ಕುರಿತು ಈಗಾಗಲೇ ಸುದೀಪ್, ಅಂಬರೀಶ್, ಉಪೇಂದ್ರ, ಯಶ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ನಟರು ಈ ಬಗ್ಗೆ ಚರ್ಚೆ ಮಾಡಿದ್ದರೂ ಕೂಡ  ಈ ವಿಚಾರ ಇಂದಿನವರೆಗೂ ಬಗೆ ಹರಿಯಲಿಲ್ಲ. ಇದೀಗ ನಟ ಹುಚ್ಚ ವೆಂಕಟ್ಟ ಅವರು ಕೂಡ ಈ ವಿಚಾರವಾಗಿ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದ್ದಾರೆ.


‘ಬಿಜೆಪಿಯಿಂದ ಆರಂಭವಾದ ವಿಷ್ಣು ಸಮಾಧಿ ವಿಚಾರ ಇಂದಿನವರೆಗೂ ಬಗೆ ಹರಿಯಲಿಲ್ಲ. ಈ ಮದ್ಯೆ ಬಿಜೆಪಿ ಸರ್ಕಾರ ನಂತರ ಕಾಂಗ್ರೇಸ್ ಸರ್ಕಾರವೂ ಆಗಿ ಹೋಯಿತು. ಇದೀಗ ಮೈತ್ರಿ ಸರ್ಕಾರ ಬಂದಿದೆ. ಈಗಾಗಲಾದರೂ ನೀವುಗಳು ವಿಷ್ಣು ಸಮಾಧಿ ವಿಚಾರವನ್ನು ತಲೆಗೆ ಹಾಕಿಕೊಂಡು ಬಗೆಹರಿಸಿ, ಮಾನ್ಯ ಮುಖ್ಯಮಂತ್ರಿಗಳೇ, ನೀವಾದರೂ ಈ ಸಮಸ್ಯೆಯನ್ನು ಬಗೆಹರಿಸುತ್ತಿರಲ್ಲವೇ..? ಬಗೆಹರಿಸಲೇಬೇಕು, ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿಗೊಳಿಸಲು ಕ್ರಮ ಕೈಗೊಂಡು ಪುಣ್ಯಭೂಮಿಯನ್ನಾಗಿ ಮಾಡಬೇಕು’ ಎಂದು ನಟ ಹುಚ್ಚ ವೆಂಕಟ್ಟ ಅವರು  ಸಿಎಂ ಕುಮಾರಸ್ವಾಮಿ ಅವರಲ್ಲಿ ಕೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋನಂ ಕಪೂರ್ ಹಾಟ್ ಅವತಾರದಲ್ಲಿ ನಟಿಸಲು ಗಂಡನ ಮನೆಯವರ ಬೆಂಬಲವಿದೆಯೇ? ಈ ಬಗ್ಗೆ ಸೋನಂ ಹೇಳಿದ್ದೇನು ಗೊತ್ತಾ?