Select Your Language

Notifications

webdunia
webdunia
webdunia
webdunia

ಮುಗ್ದ ಭಾವದ ಮೂಲದ ಪದ್ಮಶ್ರೀ ಸ್ವೀಕಾರ

ಮುಗ್ದ ಭಾವದ ಮೂಲದ ಪದ್ಮಶ್ರೀ ಸ್ವೀಕಾರ
ಗುಜರಾತ್​ , ಶುಕ್ರವಾರ, 24 ಮಾರ್ಚ್ 2023 (18:55 IST)
ಬುಡಕಟ್ಟು ಸಮುದಾಯದ ಜೀವನವನ್ನು ಉನ್ನತೀಕರಿಸಲು ನೀಡಿದ ಕೊಡುಗೆಗಾಗಿ ಸಮಾಜ ಸೇವಕಿ 70 ವರ್ಷದ ಹಿರ್ಬಾಯಿ ಇಬ್ರಾಹಿಂ ಲೋಬಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಗುಜರಾತ್​ನ ಸಿದ್ದಿ ಬುಡಕಟ್ಟು ಸಮುದಾಯದ ಮಹಿಳೆಯರ ಸಬಲೀಕರಣಕ್ಕಾಗಿ ಸಾಮಾಜಿಕ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ತರಲು ಹೆಸರು ವಾಸಿಯಾದ ಲೋಬಿ, ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಮ್ಮ ಹಾವಭಾವದ ಮೂಲಕ ಜನರ ಹೃದಯವನ್ನು ಗೆದ್ದರು. ವಿಡಿಯೋದಲ್ಲಿ, ಪ್ರಶಸ್ತಿ ಪಡೆಯಲು ನಡೆದುಕೊಂಡು ಹೋಗುತ್ತಿರುವಾಗ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಹಲವಾರು ಕೇಂದ್ರ ಸಚಿವರು ಕುಳಿತಿದ್ದ ಮೊದಲ ಸಾಲಿನ ಬಳಿ ಸ್ವಲ್ಪ ಸಮಯ ನಿಂತು ಧೈರ್ಯದಿಂದ ಮಾತನಾಡಿದರು. ಪ್ರಧಾನಿ ಮೋದಿಯವರ ಬುಡಕಟ್ಟು ಜನಾಂಗದವರ ಉದಾತ್ತ ಕೆಲಸಕ್ಕಾಗಿ ಶ್ಲಾಘಿಸಿದರು. ಅಪರೂಪದ ಆಶೀರ್ವಾದದ ಅಭಿವ್ಯಕ್ತಿಯಲ್ಲಿ, ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಿದರು. ನನ್ನ ಪ್ರೀ ತಿಯ ಸಹೋದರ ನರೇಂದ್ರ, ನೀವು ನನ್ನ ಚೀಲವನ್ನು ಅನ್ನು ಸಂತೋಷದಿಂದ ತುಂಬಿದ್ದೀರಿ ಎಂದು ಹೇಳಿದರು. ಸಭಾಂಗಣದಲ್ಲಿ ಆಕೆಯ ಭಾವೋದ್ವೇಗಕ್ಕೆ ಚಪ್ಪಾಳೆ ತಟ್ಟಿದರು. ತಮ್ಮ ಆಶೀರ್ವಾದವನ್ನು ತಿಳಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭುಜದ ಮೇಲೆ ತನ್ನ ಎರಡೂ ಕೈಗಳನ್ನು ಇರಿಸುವ ಮೂಲಕ ಪ್ರೀತಿ ವ್ಯಕ್ತಪಡಿಸಿದರು. ಮುರ್ಮು ಬುಡಕಟ್ಟು ಸಮುದಾಯದಿಂದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿರುವುದರಿಂದ ಲೋಬಿ ಅವರು ರಾಷ್ಟ್ರಪತಿಗಳ ಬಗ್ಗೆ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕೊವಿಡ್​​ ಹೆಚ್ಚಳ