ಬಳ್ಳಾರಿಯಲ್ಲಿ DAR ಪೊಲೀಸ್ ಪೇದೆ ಜಾಫರ್ ಎಂಬುವವರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಪೊಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಸಾವನಪ್ಪಿದ್ದು, ಇದು ಸಹಜ ಸಾವಲ್ಲ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಪ್ರಜ್ಞೆ ತಪ್ಪಿಸಿ, ರಾಡಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.. ಕಿವಿಯಲ್ಲಿ ಅಧಿಕ ರಕ್ತಸ್ರಾವದಿಮದ ಗಾಯಗೊಂಡಿದ್ದ ಜಾಫರ್ನನ್ನು ಬಳ್ಳಾರಿಯ ವಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾಫರ್ ಮೃತ ಪಟ್ಟಿದ್ದಾರೆ. 2009ರಲ್ಲಿ DAR ಪೊಲೀಸ್ ಪೇದೆಯಾಗಿ ಜಾಫರ್ ನೇಮಕವಾಗಿದ್ರು. ಜಾಫರ್ ಎರಡು ಮದುವೆಯಾಗಿದ್ದು, ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಈಕೆ ತವರು ಮನೆಯಲ್ಲೇ ಇದ್ರು. ಎರಡನೇ ಹೆಂಡತಿ ಹಿಂದೂ ಧರ್ಮಕ್ಕೆ ಸೇರಿದ್ದು, ಈಕೆ ಆಸ್ಪತ್ರೆವೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ರು. ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಮತ್ತು ಜಾಫರ್ ನಡುವೆ ಜಗಳ ನಡೆದಿತ್ತಂತೆ. ಜಾಫರ್ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.