Publish Date: Fri, 24 Mar 2023 (15:40 IST)
Updated Date: Fri, 24 Mar 2023 (14:51 IST)
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಿಜೆಪಿಯವರು ಮೋಸ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.
ಅಲ್ಲದೇ ಇಷ್ಟು ದಿವಸ ಇಲ್ಲದಿದ್ದದು ರಾತ್ರೋರಾತ್ರಿ ಶಿಫಾರಸು ಮಾಡಿದ್ದಾರೆ.ನಾವು ಪ್ರತಿಭಟನೆ ನಡೆಸುತ್ತೇವೆಂಬ ಕಾರಣಕ್ಕೆ ಶಿಫಾರಸು ಮಾಡಿದ್ದಾರೆ.ಚುನಾವಣೆ ಕಾರಣಕ್ಕೆ ಗಿಮಿಕ್ ಮಾಡುತ್ತಿದ್ದಾರೆ.ಶೇ.೫೦ಕ್ಕಿಂತಲೂ ಮೀಸಲಾತಿ ಪ್ರಮಾಣ ಹೆಚ್ಚುವಂತಿಲ್ಲ.ಈಗ ರಾಜ್ಯದಲ್ಲಿ ಒಟ್ಟು ೫೬% ಹೆಚ್ಚಿಸಿದರೆ ಮೀಸಲಾತಿ ಸಾಧ್ಯವಿದೆಯಾ ಒಂಬತ್ತನೇ ಶೆಡ್ಯೂಲ್ ಗೆ ಯಾಕೆ ಸೇರಿಸುತ್ತಿಲ್ಲ.ಇದೆಲ್ಲಾ ಕೇವಲ ಸಮುದಾಯದ ಮತಗಳನ್ನ ಸೆಳೆಯುವ ತಂತ್ರವಷ್ಟೇ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.