Publish Date: Fri, 24 Mar 2023 (16:00 IST)
Updated Date: Fri, 24 Mar 2023 (14:54 IST)
ಸರ್ಕಾರ ಎಸ್ ಸಿ,ಎಸ್ ಟಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೈ ನಾಯಕರು ಪ್ರತಿಭಟನೆ ಮಾಡುತ್ತಿದ್ದು,ಕೆಪಿಸಿಸಿಯಿಂದ ರಾಜಭವನ ಚಲೋವನ್ನ ಕಾಂಗ್ರೆಸ್ ಹಮ್ಮಿಕೊಂಡಿದೆ.ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಡಾ.ಜಿ ಪರಮೇಶ್ವರ್, ರಾಮಲಿಂಗಾರೆಡ್ಡಿ ಸೇರಿದಂತೆ ಕೈ ಮುಖಂಡರು ಭಾಗಿಯಾಗಿದ್ದಾರೆ.ಕೆಪಿಸಿಸಿಯಿಂದ ರಾಜಭವನ ವರೆಗೂ ಕಾಂಗ್ರೆಸ್ ನಾಯಕರು ಹೊರಟಿದ್ದು,ಇಂಡಿಯನ್ ಎಕ್ಸ್‌ಪ್ರೆಸ್ ಸರ್ಕಲ್ ಬಳಿ ಕಾಂಗ್ರೆಸ್ ನಾಯಕರನ್ನ ಬಂಧನ ಮಾಡಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್,ಸಿದ್ದರಾಮಯ್ಯ, ಸಲೀಂ ಅಹಮ್ಮದ್ ಸೇರಿದಂತೆ ಕೈ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.