Select Your Language

Notifications

webdunia
webdunia
webdunia
webdunia

ಇಂದು ಚಾಲುಕ್ಯರ ನಾಡಲ್ಲಿ ‘ನಮೋ’ ಮೋಡಿ

ಇಂದು ಚಾಲುಕ್ಯರ ನಾಡಲ್ಲಿ ‘ನಮೋ’ ಮೋಡಿ
ಬಾಗಲಕೋಟೆ , ಶನಿವಾರ, 6 ಮೇ 2023 (20:40 IST)
ಇಂದು ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಒಟ್ಟು 7 ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬಾದಾಮಿ ಪಟ್ಟಣದ ಹೊರವಲಯದ ಬನಶಂಕರಿ ‌ಲೇಔಟ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಹುಬ್ಬಳ್ಳಿಯಿಂದ 2.50ಕ್ಕೆ MI-17 ಮೂರು ಸೇನಾ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರಿಗೆ 25 ಜನ ಬಿಜೆಪಿ ಪ್ರಮುಖರು ಸ್ವಾಗತ ಕೋರಲಿದ್ದಾರೆ. 3 ಗಂಟೆಗೆ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದಾರೆ. ಸುಮಾರು 2 ಲಕ್ಷ ಜನರನ್ನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಚಾಲುಕ್ಯರ ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಮೋದಿ ಕಾರ್ಯಕ್ರಮದ ಭದ್ರತೆಗೆ ಅಂದಾಜು ಒಂದೂವರೆ ಸಾವಿರಕ್ಕೂ ಅಧಿಕ ಜನ ಪೊಲೀಸರ ಭದ್ರತೆ ಒದಗಿಸಲಾಗಿದೆ. 2 SP, 1 ಹೆಚ್ಚುವರಿ SP, 9 DySP, 23 CPI, 70 PSI, 135 ASI, 867 ಪೇದೆಗಳು, 800 ಹೋಮ್ ​​ಗಾರ್ಡ್​​​ಗಳನ್ನು ನಿಯೋಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕುಂದಾನಗರಿಯಲ್ಲಿ ‘ರಾಗಾ’