Select Your Language

Notifications

webdunia
webdunia
webdunia
webdunia

ಝಿಕಾ ವೈರಸ್ : ಪೋಷಕರಿಗೆ ಹೆಚ್ಚಿದ ಆತಂಕ !

ಝಿಕಾ ವೈರಸ್ : ಪೋಷಕರಿಗೆ ಹೆಚ್ಚಿದ ಆತಂಕ !
ರಾಯಚೂರು , ಗುರುವಾರ, 15 ಡಿಸೆಂಬರ್ 2022 (08:40 IST)
ರಾಯಚೂರು : ರಾಜ್ಯದಲ್ಲೇ ಮೊದಲ ಪ್ರಕರಣವಾಗಿ ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ಯಾವುದೇ ಮಕ್ಕಳ ಆಸ್ಪತ್ರೆಯನ್ನು ನೋಡಿದರೂ ತುಂಬಿ ತುಳುಕುತ್ತಿವೆ.

ಝಿಕಾ ವೈರಸ್ ಆತಂಕದಲ್ಲಿ ಸಣ್ಣ ಜ್ವರಕ್ಕೂ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಜ್ವರ ಬಂದರೂ ಡೆಂಗ್ಯೂ ಲಕ್ಷಣಗಳ ಅನುಮಾನಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಚಂಡಮಾರುತದ ಪರಿಣಾಮ ವಾತಾವರಣ ಬದಲಾಗಿರುವುದರಿಂದಲೂ ಮಕ್ಕಳಲ್ಲಿ ಜ್ವರ, ನೆಗಡಿಯಂತ ಸಾಮಾನ್ಯ ರೋಗಗಳು ಹೆಚ್ಚಾಗಿವೆ.

ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಬಳಿಕ ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮಕ್ಕಳ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಲಿನಿಕ್ಗಳಲ್ಲೂ ಕೂಡಾ ಮಕ್ಕಳನ್ನು ಕರೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ.

ಆರೋಗ್ಯ ಇಲಾಖೆಯ ಜಾಗೃತಿ ನಡುವೆಯೂ ಪೋಷಕರು ಆತಂಕಗೊಂಡಿದ್ದಾರೆ. ಝಿಕಾ ವೈರಸ್ ಬಗ್ಗೆ ಚಿಕ್ಕಮಕ್ಕಳ ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಸಿಎಂ ಜೊತೆ ಅಮಿತ್ ಶಾ ಚರ್ಚೆ