Publish Date: Wed, 09 Nov 2022 (08:47 IST)
Updated Date: Wed, 09 Nov 2022 (08:49 IST)
ಚೆನ್ನೈ : ನಕಲಿ ವೈದ್ಯನೊಬ್ಬ ಚುಚ್ಚುಮದ್ದು ನೀಡಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುದುನಗರದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಬಾಲಕ ಕವಿ ದೇವನಾಥನ್ಗೆ ನವೆಂಬರ್ 4 ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನು ತಂದೆ ಮಹೇಶ್ವರನ್ ಸ್ಥಳೀಯವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಕ್ಯಾಥರೀನ್ ಬಳಿಗೆ ಕರೆದುಕೊಂಡು ಬಂದಿದ್ದರು.
ಬಾಲಕನಿಗೆ ನಕಲಿ ವೈದ್ಯ ಜ್ವರಕ್ಕಾಗಿ ಚುಚ್ಚುಮದ್ದನ್ನು ನೀಡಿದ್ದು, ಮನೆಗೆ ಹಿಂದಿರುಗಿದಾಗ ಬಾಲಕನ ಕಾಲುಗಳು ಊದಿಕೊಳ್ಳಲು ಪ್ರಾರಂಭಿಸಿತ್ತು.
ಬಳಿಕ ಬಾಲಕನನ್ನು ಮಹೇಶ್ವರನ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮಹೇಶ್ವರನ್ ಅವರ ಮನವಿಯ ಮೇರೆಗೆ ಪ್ಯಾರಸಿಟಮಾಲ್ ಚುಚ್ಚುಮದ್ದನ್ನು ನೀಡಿದರು. ಆದರೆ ಬಾಲಕನನ್ನು ಮನೆಗೆ ವಾಪಸ್ ಕರೆದುಕೊಂಡು ಹೋದಾಗ ಆತ ಕುಸಿದು ಬಿದ್ದಿದ್ದಾನೆ.
ತಕ್ಷಣ ಬಾಲಕನನ್ನು ರಾಜಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.