Publish Date: Wed, 09 Nov 2022 (08:35 IST)
Updated Date: Wed, 09 Nov 2022 (08:36 IST)
ಶಿವಮೊಗ್ಗ : ಟಿಇಟಿ ಪರೀಕ್ಷೆಯ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್ಟಿಕೆಟ್ನಲ್ಲಿ ಸನ್ನಿಲಿಯೋನ್ ಅಶ್ಲೀಲ ಭಾವಚಿತ್ರವೊಂದು ಅಪ್ಲೋಡ್ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇತ್ತೀಚೆಗೆ ನಡೆದ ಟಿಇಟಿ ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ನಲ್ಲಿ ಸನ್ನಿ ಲಿಯೋನ್ ಫೋಟೋ ಬಂದಿತ್ತು. ಅಷ್ಟೇ ಅಲ್ಲದೇ ಇದು ವೈರಲ್ ಆಗಿತ್ತು. ಈ ಹಿನ್ನೆಲಯಲ್ಲಿ ಶಿವಮೊಗ್ಗದಲ್ಲಿ ದೂರು ದಾಖಲಾಗಿದೆ.
ಸನ್ನಿ ಲಿಯೋನ್ ಅಶ್ಲೀಲ ಭಾವಚಿತ್ರ ಹಾಲ್ ಟಿಕೆಟ್ನಲ್ಲಿ ಬಂದಿದ್ದಾದರೂ ಹೇಗೆ? ಫೋಟೋ ಎಲ್ಲಿಂದ ಅಪ್ಲೋಡ್ ಆಯ್ತು ಎಂಬುದರ ಬಗ್ಗೆ ಇದೀಗ ಶಿವಮೊಗ್ಗದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.