Select Your Language

Notifications

webdunia
webdunia
webdunia
webdunia

ಜಮೀರ್ ಅಹ್ಮದ್ ಕರಿಯಾ ಹೇಳಿಕೆ ಇಫೆಕ್ಟ್ ಆಗಲ್ಲ ಎಂದು ಮೊದಲೇ ಹೇಳಿದ್ದೆ: ಡಿಕೆ ಸುರೇಶ್

DK Suresh

Krishnaveni K

ಚನ್ನಪಟ್ಟಣ , ಶನಿವಾರ, 23 ನವೆಂಬರ್ 2024 (11:51 IST)
Photo Credit: X
ಚನ್ನಪಟ್ಟಣ: ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜಮೀರ್ ಅಹ್ಮದ್ ನೀಡಿದ್ದ ಕರಿಯಾ ಹೇಳಿಕೆ ಇಫೆಕ್ಟ್ ಆಗಲ್ಲ ಎಂದು ಮೊದಲೇ ಹೇಳಿದ್ದೆ. ಅದೇ ರೀತಿ ಆಗಿದೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಈ ಬಾರಿ ಚನ್ನಪಟ್ಟಣದಿಂದ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ನಿಂದ ಸಿಪಿ ಯೋಗೇಶ್ವರ್ ಕಣಕ್ಕಿಳಿದಿದ್ದರು. ಈಗಿನ ವರದಿ ಪ್ರಕಾರ ಯೋಗೇಶ್ವರ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಈ ಹಿನ್ನಲೆಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ಜಮೀರ್ ಅಹ್ಮದ್ ಕರಿಯಾ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ನಾನು ಈ ಮೊದಲೇ ಹೇಳಿದ್ದೆ. ಜಮೀರ್ ಹೇಳಿಕೆ ಇಫೆಕ್ಟ್ ಆಗಲ್ಲ ಅಂತ. ಜಮೀರ್ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ವರ್ಣನಿಂದನೆ ಎಂದೆಲ್ಲಾ ಬಿಂಬಿಸಿದ್ದು ಮಾಧ್ಯಮಗಳು. ನೀವು ಒಂದು ಅಭ್ಯರ್ಥಿಯ ಪರವಾಗಿ ಇದನ್ನು ದೊಡ್ಡ ವಿಚಾರವಾಗಿ ಬಿಂಬಿಸಿದಿರಿ’ ಎಂದು ಮಾಧ್ಯಮಗಳ ಮೇಲೆಯೇ ಆರೋಪ ಹೊರಿಸಿದ್ದಾರೆ.

ಚನ್ನಪಟ್ಟಣ ಮಾತ್ರವಲ್ಲ ಮೂರೂ ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಈ ಮೊದಲೇ ಹೇಳಿದ್ದೆವು. ಅದರಂತೆ ನಮ್ಮ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ಕೈ ಹಿಡಿದಿದ್ದಾರೆ. ಬಿಜೆಪಿಯವರು ಇನ್ನಾದರೂ ರಾಜಕೀಯಕ್ಕಾಗಿ ನಮ್ಮ ಸರ್ಕಾರದ ಬಗ್ಗೆ, ಮುಖ್ಯಮಂತ್ರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸುವುದನ್ನು ಬಿಡಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka bye election result: ಸಂಡೂರಿನಲ್ಲಿ ಅನ್ನಪೂರ್ಣಗೆ ಗೆಲುವು