Select Your Language

Notifications

webdunia
webdunia
webdunia
Sunday, 6 April 2025
webdunia

ಒಂದೇ ದಿನ ಮೂವರು ಬಾಣಂತಿಯರು ಸಾವನ್ನಪ್ಪಿದರೂ ಬಳ್ಳಾರಿಗೆ ತಲೆಯೂ ಹಾಕದ ಜಮೀರ್ ಅಹ್ಮದ್

Zameer Ahmed Khan

Krishnaveni K

ಬಳ್ಳಾರಿ , ಸೋಮವಾರ, 18 ನವೆಂಬರ್ 2024 (12:22 IST)
ಬಳ್ಳಾರಿ: ಒಂದೇ ದಿನ ಮೂವರು ಬಾಣಂತಿಯರು ಸಾವನ್ನಪ್ಪಿದ ಘಟನೆ ಬಳ್ಳಾರಿಯಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಇಂತಹ ಗಂಭೀರ ಲೋಪವಾಗಿದ್ದರೂ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅತ್ತ ಕಡೆ ತಲೆಯೂ ಹಾಕದೇ ಇರುವುದು ಟೀಕೆಗೆ ಗುರಿಯಾಗಿದೆ.

ನವಂಬರ್ 9 ರಂದು ಹೆರಿಗೆಗೆಂದು ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಗೊಳಗಾಗಿದ್ದರು. ಮರುದಿನ ಅಂದರೆ ನವಂಬರ್ 10 ರಂದು ಈ ಪೈಕಿ ನಂದಿನಿ, ಲಲಿತಮ್ಮ ಎಂಬವರು ಮೃತಪಟ್ಟಿದ್ದರು. ನವಂಬರ್ 13 ರಂದು ಮತ್ತೊಬ್ಬ ಬಾಣಂತಿ ರೋಜಮ್ಮ ಎಂಬವರು ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರ ಸ್ಥಿತಿಯೂ ಗಂಭೀರವಾಗಿದ್ದು ಬಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಇಂತಹ ಗಂಭೀರ ಘಟನೆಯಾಗಿದ್ದರೂ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ತಮ್ಮದೇ ರಾಜಕೀಯ ಕ್ಷೇತ್ರದಲ್ಲಿ ಮುಳುಗಿದ್ದಾರೆ. ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜಮೀರ್ ಬಳ್ಳಾರಿ ಕಡೆಗೆ ತಲೆಯೂ ಹಾಕಿಲ್ಲ. ಇದು ತೀವ್ರ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದಷ್ಟೇ ಹೇಳುವ ಜಮೀರ್ ಘಟನೆ ಯಾಕಾಯಿತು, ಏನು ಎಂಬುದರ ಬಗ್ಗೆ ವಿಚಾರಿಸಲು ಖುದ್ದಾಗಿ ಸ್ಥಳಕ್ಕೆ ಭೇಟಿಯೇ ನೀಡಿಲ್ಲ. ಹೀಗಾಗಿ ಸಚಿವರಿಗೆ ಜನರ ಹಿತಕ್ಕಿಂತ ಚುನಾವಣೆಯೇ ಮುಖ್ಯವಾಯಿತೇ ಎಂದು ಜನ ಟೀಕೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಭಾಗ್ಯ ಕೊಟ್ಟವರು ಯಾರು, ಬಿಜೆಪಿಯವರಲ್ಲ ನಾನು ಮಾಡಿದ್ದು: ಸಿದ್ದರಾಮಯ್ಯ