ಬೆಂಗಳೂರು: ಉಪಚುನಾವಣೆ ಹೊಸ್ತಿಲಲ್ಲಿ ಸಚಿವ ಜಮೀರ್ ಅಹ್ಮದ್ ನೀಡಿದ ಕೆಲವೊಂದು ಹೇಳಿಕೆಗಳು ಈಗ ಸ್ವಪಕ್ಷೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಹೇಳಿಕೆಗಳೇ ಡ್ಯಾಮೇಜ್ ಮಾಡುವ ಭಯ ಶುರುವಾಗಿದೆ.
ಉಪಚುನಾವಣೆ ಹೊಸ್ತಿಲಲ್ಲೇ ಜಮೀರ್ ವಕ್ಫ್ ವಿವಾದ ಮೈಮೇಲೆಳೆದುಕೊಂಡರು. ಅನೇಕರ ರೈತರ ಜಮೀನಿಗೆ ವಕ್ಫ್ ಸಚಿವ ಜಮೀರ್ ಸೂಚನೆ ಮೇರೆಗೇ ನೋಟಿಸ್ ನೀಡಲಾಗಿತ್ತು ಎಂದು ಕೆಲವರು ಅಧಿಕಾರಿಗಳೇ ಬಾಯ್ಬಿಟ್ಟರು. ಇದರಿಂದ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಮತ್ತೊಮ್ಮೆ ಪ್ರೂವ್ ಮಾಡಿದಂತಾಗಿದೆ.
ಇದರ ವಿರುದ್ಧ ಕಾಂಗ್ರೆಸ್ ನ ಕೆಲವು ನಾಯಕರು ಈಗಾಗಲೇ ಹೈಕಮಾಂಡ್ ಗೆ ದೂರು ನೀಡಿದ್ದರು. ಅವರ ಕೆಲವೊಂದು ಹೇಳಿಕೆಗಳು, ಕ್ರಮಗಳು ಪಕ್ಷಕ್ಕೆ ಮುಳುವಾಗುತ್ತಿದೆ ಎಂದು ದೂರಿದ್ದರು. ಅದರ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ಮೈ ಬಣ್ಣವನ್ನು ಇಟ್ಟುಕೊಂಡು ನೀಡಿರುವ ಹೇಳಿಕೆಯಿಂದ ಒಕ್ಕಲಿಗರ ಮತಕ್ಕೆ ಕುತ್ತು ಬಂದ ಆತಂಕ ಎದುರಾಗಿದೆ.
ಚನ್ನಪಟ್ಟಣದಲ್ಲಿ ಜಮೀರ್ ಹೇಳಿಕೆ ನನಗೆ ಹಿನ್ನಡೆಯಾಗಬಹುದು ಎಂದು ಸ್ವತಃ ಸಿಪಿ ಯೋಗೇಶ್ವರ್ ಒಪ್ಪಿಕೊಂಡಿದ್ದಾರೆ. ಇದೀಗ ಒಂದು ವೇಳೆ ಚನ್ನಪಟ್ಟಣದಲ್ಲಿ ಸೋತರೆ ಜಮೀರ್ ವಿರುದ್ಧ ಕಾಂಗ್ರೆಸ್ ನಾಯಕರು ರೊಚ್ಚಿಗೇಳುವುದಂತೂ ಖಂಡಿತಾ.