Select Your Language

Notifications

webdunia
webdunia
webdunia
webdunia

Channapatna Bye Election: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಕಣ್ಣೀರಿಗೆ ಬೆಲೆ ಇಲ್ಲ

Nikhil Kumaraswamy

Krishnaveni K

ಚನ್ನಪಟ್ಟಣ , ಶನಿವಾರ, 23 ನವೆಂಬರ್ 2024 (10:38 IST)
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಯಾಕೋ ಕಣ್ಣೀರೂ ವರ್ಕೌಟ್ ಆದಂತೆ ಕಾಣುತ್ತಿಲ್ಲ. ಇಲ್ಲಿ ಸಿಪಿ ಯೋಗೇಶ್ವರ್ ಮುನ್ನಡೆ ಅಂತರ ಹೆಚ್ಚಾಗುತ್ತಿದೆ.

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ನಡುವೆ ಭಾರೀ ಪೈಪೋಟಿಯಿತ್ತು. ಆದರೆ ಈಗ 9 ನೇ ಸುತ್ತಿನ ಮತ ಎಣಿಕೆ ಬಳಿಕ ಸಿಪಿ ಯೋಗೇಶ್ವರ್ 18 ಸಾವಿರ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಇಲ್ಲಿನ ಟ್ರೆಂಡ್ ನೋಡಿದರೆ ಯೋಗೇಶ್ವರ್ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗುತ್ತಿರುವಂತಿದೆ.

ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದ್ದರಿಂದ ಬಿಜೆಪಿ ತೊರೆದು ಕೊನೆಯ ಕ್ಷಣದಲ್ಲಿ ಯೋಗೇಶ್ವರ್ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಅವರಿಗೆ ವೈಯಕ್ತಿಕ ವರ್ಚಸ್ಸು ಪ್ಲಸ್ ಡಿಕೆ ಬ್ರದರ್ಸ್ ಪ್ರಭಾವ ವರ್ಕೌಟ್ ಆಗಿದೆ ಎನ್ನಬಹುದು. ಜೊತೆಗೆ ಮುಸ್ಲಿಮರ ವೋಟ್ ಕೂಡಾ ನಿರ್ಣಾಯಕ ಪಾತ್ರ ವಹಿಸಿದೆ.

ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆಯಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಪ್ರಚಾರದ ವೇಳೆ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅದು ಯಾವುದೂ ವರ್ಕೌಟ್ ಆದಂತೆ ಕಾಣುತ್ತಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

Wayanad Election result: ವಯನಾಡಿನಲ್ಲಿ ತಮ್ಮ ರಾಹುಲ್ ಸ್ಥಾನ ಪ್ರಿಯಾಂಕ ವಾದ್ರಾಗೆ ಪಕ್ಕಾ