Select Your Language

Notifications

webdunia
webdunia
webdunia
webdunia

Karnataka Bye Election result live: ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿಗೆ ಕೂದಲೆಳೆಯಷ್ಟೇ ಅಂತರ

Bharath Bommai

Krishnaveni K

ಶಿಗ್ಗಾಂವಿ , ಶನಿವಾರ, 23 ನವೆಂಬರ್ 2024 (08:57 IST)
ಶಿಗ್ಗಾಂವಿ: ಕರ್ನಾಟಕ ಬೈ ಎಲೆಕ್ಷನ್ ಮತ ಎಣಿಕೆ ಆರಂಭವಾಗಿದ್ದು, ಶಿಗ್ಗಾಂವಿಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಟಫ್ ಫೈಟ್ ಕಂಡುಬರುತ್ತಿದೆ. ಚನ್ನಪಟ್ಟಣಕ್ಕಿಂತಲೂ ಶಿಗ್ಗಾಂವಿ ಹೆಚ್ಚು ಕುತೂಹಲಕಾರೀ ಫಲಿತಾಂಶ ನೀಡುವ ಸಾಧ್ಯತೆಯಿದೆ.

ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಆರಂಭಿಕ ಮುನ್ನಡೆ ಗಳಿಸಿದ್ದಾರೆ. ಹಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಎದುರು ಅವರಿಗೆ ಹೆಚ್ಚು ಮುನ್ನಡೆಯಿಲ್ಲ. ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆ ಮೊದಲು ಬಂಡಾಯದ ಬಿಸಿಯಿದ್ದರೂ ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಕ್ಷೇತ್ರಕ್ಕೆ ತೆರಳಿ ಬಂಡಾಯ ಶಮನ ಮಾಡಿದ್ದರು.

ಹೀಗಾಗಿ ಈ ತಂತ್ರ ಕಾಂಗ್ರೆಸ್ ಗೆ ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು. ಇದೇ ಕಾರಣಕ್ಕೆ ಪಠಾಣ್ ಎದುರಾಳಿ ಭರತ್ ಬೊಮ್ಮಾಯಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಎರಡನೇ ಸುತ್ತಿನಲ್ಲೂ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ.ಹಾಗಿದ್ದರೂ ಅಂತ ಕಡಿಮೆಯಿದೆ ಎನ್ನುವುದು ಗಮನಾರ್ಹ ಅಂಶವಾಗಿದೆ.

ಇನ್ನು, ಸಂಡೂರಿನಲ್ಲಿ 2715 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಮುನ್ನಡೆಯಲ್ಲಿದ್ದಾರೆ. ಇನ್ನೊಂದೆಡೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅಲ್ಪ ಮುನ್ನಡೆಯಲ್ಲಿದ್ದಾರೆ. ಇದು ಆರಂಭಿಕ ಸುತ್ತಿನಲ್ಲಿ ಮಾತ್ರ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Bye Election result live: ಮೂರು ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ