Publish Date: Sat, 20 Oct 2018 (16:54 IST)
Updated Date: Sat, 20 Oct 2018 (16:57 IST)
ಮಂಗಳೂರು : ಇತ್ತೀಚೆಗೆ ದಾನ ಧರ್ಮದ ಮೂಲಕ ಗಮನಸೆಳೆಯುತ್ತಿರುವ ಸಚಿವ ಜಮೀರ್ ಅಹ್ಮದ್ ತಮಗೆ ಒಳ್ಳೆಯ ಮಾಂಸದೂಟ ಹಾಕಿದ ಮಗಳೂರಿನ ಹೋಟೆಲ್ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳೂರಿನಲ್ಲಿ ಸಭೆ ನಡೆಸಿದ ಸಚಿವ ಜಮೀರ್ ಅಹ್ಮದ್ ಸಭೆ ಬಳಿಕ ಮಧ್ಯಾಹ್ನದ ಊಟಕ್ಕೆ ನಗರದ ಕಂಕನಾಡಿ ಲೋವರ್ ಬೆಂದೂರ್‌ವೆಲ್‌ನಲ್ಲಿರುವ ‘ಫಿಶ್ ಮಾರ್ಕೆಟ್’ ಸೀಫುಡ್ ರೆಸ್ಟೋರೆಂಟ್‌ಗೆ ತೆರಳಿದ್ದರು. ಅಲ್ಲಿ ಅಂಜಲ್, ಮಾಂಜಿ ಮೀನು, ಸಿಗಡಿ, ನೀರುದೋಸೆ, ಕಲ್ತಪ್ಪ ಸೇವಿಸಿದ ಸಚಿವರು ಆ ಊಟವನ್ನು ಮೆಚ್ಚಿಕೊಂಡಿದ್ದಾರೆ.
ಅಲ್ಲದೇ ತನಗೆ ರುಚಿಕರವಾದ ಊಟ ಕೊಟ್ಟ ಹೋಟೆಲ್‌ನ ಬಾಣಸಿಗನನ್ನು ಕರೆದು ಅವರಿಗೆ ಪವಿತ್ರ ಮೆಕ್ಕಾ ಯಾತ್ರೆಯ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮಾತ್ರವಲ್ಲದೆ, ಊಟ ಮಾಡಿದ ಬಳಿಕ ಹೊಟೇಲ್‌ನಲ್ಲಿರುವ ಎಲ್ಲ ಸಿಬ್ಬಂದಿಯನ್ನು ಬಳಿ ಕರೆದು 25 ಸಾವಿರ ರು. ಟಿಫ್ಸ್ ನೀಡಿ, ಹಂಚಿಕೊಳ್ಳುವಂತೆ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.