Publish Date: Tue, 02 Oct 2018 (10:56 IST)
Updated Date: Tue, 02 Oct 2018 (10:58 IST)
ಮಂಗಳೂರು : ವಿವಾಹಕ್ಕೂ ಮೊದಲು ಲೈಂಗಿಕ ಸಂಪರ್ಕ ಹೊಂದಿದ ಪ್ರತಿಫಲವಾಗಿ ಜನಿಸಿದ ಶಿಶುವನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪಟ್ರಮೆಯಲ್ಲಿ ನಡೆದಿದೆ.
ವಿವಾಹಕ್ಕೂ ಮೊದಲು ಲೈಂಗಿಕ ಸಂಪರ್ಕ ಹೊಂದಿದ ಪ್ರತಿಫಲವಾಗಿ ಗರ್ಭಿಣಿಯಾಗಿದ್ದ ಯುವತಿ ಸೆ. 23 ರಂದು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಜನ್ಮ ನೀಡಿದ ಯುವತಿ ತನ್ನ ಪ್ರಿಯಕರ ಶಿವಪ್ಪ (45)ನ ಜೊತೆ ಸೇರಿ ನವಜಾತ ಶಿಶುವನ್ನು ಕೊಂದು ಗುಡ್ಡದಲ್ಲಿ ಹೂತು ಹಾಕಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಯುವತಿಯ ಸಹೋದರ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಹೂತಿದ್ದ ಶಿಶುವಿನ ಶವ ಹೊರತೆಗೆದು ಮಹಜರು ನಡೆಸಿದ್ದಾರೆ. ಶಿವಪ್ಪನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮಗುವಿನ ತಾಯಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.