Publish Date: Sun, 14 Oct 2018 (08:14 IST)
Updated Date: Sun, 14 Oct 2018 (08:16 IST)
ಮಂಗಳೂರು: ಕಡಲ ತೀರ ಮಂಗಳೂರಿಗೆ ಇಂದು ಸಿಎಂ ಕುಮಾರಸ್ವಾಮಿ ಪ್ರಯಾಣ ಬೆಳೆಸಲಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮೈಸೂರು ದಸರಾದಂತೆ ಮಂಗಳೂರಿನಲ್ಲೂ ದಸರಾ ಸಂಭ್ರಮ ಪ್ರತಿವರ್ಷವೂ ನಡೆಯುತ್ತದೆ. ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಸಿಎಂ ಕುಮಾರಸ್ವಾಮಿ ಬಳಿಕ ವಿವಿಧ ಜನಪರ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮಂಗಳೂರು ಮತ್ತು ಕರಾವಳಿ ಪ್ರದೇಶವನ್ನು ಸಮ್ಮಿಶ್ರ ಸರ್ಕಾರ ನಿರ್ಲಕ್ಷಿಸಿದೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಹೀಗಾಗಿ ಇಂದಿನ ಸಿಎಂ ಭೇಟಿಯಲ್ಲಿ ಅದಕ್ಕೆ ಯಾವ ರೀತಿಯ ಮುಲಾಮು ಹಚ್ಚಲಿದ್ದಾರೆ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.