Publish Date: Sat, 26 May 2018 (08:40 IST)
Updated Date: Sat, 26 May 2018 (08:45 IST)
ಬೆಂಗಳೂರು: ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆದ್ದ ತಕ್ಷಣವೇ ಸದನ ಕಲಾಪ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿಗೆ ಶಾಸಕರಿಂದ ಅಭಿನಂದನೆ ನಡೆಯುತ್ತಿತ್ತು.
ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಗುಂಪಾಗಿ ಬಂದು ಕುಮಾರಸ್ವಾಮಿಯವರ ಕೈಕುಲುಕಿ ಅಭಿನಂದನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಳೆಯ ದೋಸ್ತಿ, ಮತ್ತೆ ವಿರೋಧಿಗಳಾಗಿದ್ದ ಜಮೀರ್ ಅಹಮ್ಮದ್ ಕೂಡಾ ಕುಮಾರಸ್ವಾಮಿ ಬಳಿ ಬಂದರು.
ಕುಮಾರಸ್ವಾಮಿಯವರ ಕೈಕುಲುಕಿ ಜಮೀರ್ ಅಹಮ್ಮದ್ ಶುಭ ಹಾರೈಸುತ್ತಿದ್ದಂತೆ, ಕುಮಾರಸ್ವಾಮಿ ವಿಶೇಷವಾಗಿ ಜಮೀರ್ ಗೆ ಕೆನ್ನೆ ತಟ್ಟಿ ನಕ್ಕು ಕಳುಹಿಸಿಕೊಟ್ಟರು. ಇದಕ್ಕೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ್ದ ಜಮೀರ್ ನಾನು ಕುಮಾರಸ್ವಾಮಿ ಈಗ ದೋಸ್ತಿ. ಹಳೆಯ ಕಾಲದಲ್ಲಿದ್ದಷ್ಟು ಒಡನಾಟ ನಮ್ಮಲ್ಲಿ ಇಲ್ಲದಿರಬಹುದು. ಆದರೂ ಸ್ನೇಹಿತರಾಗಿದ್ದೇವೆ ಎಂದಿದ್ದರು. ಅದನ್ನು ಸದನದಲ್ಲಿ ಇಬ್ಬರೂ ಸಾಬೀತುಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.