Select Your Language

Notifications

webdunia
webdunia
webdunia
webdunia

ಮೊದಲಬಾರಿಗೆ ಭಾರತ-ಅಮೆರಿಕ ಸಂಬಂಧದ ಬಗ್ಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ

ಮೊದಲಬಾರಿಗೆ ಭಾರತ-ಅಮೆರಿಕ ಸಂಬಂಧದ ಬಗ್ಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ
ಅಮೆರಿಕಾ , ಶನಿವಾರ, 26 ಮೇ 2018 (07:11 IST)
ಅಮೇರಿಕ : ಎಪ್ರಿಲ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಮೈಕ್ ಪಾಂಪಿಯೊ ಅವರು  ಮೊದಲಬಾರಿಗೆ ಭಾರತದ ಬಗ್ಗೆ ಹೇಳಿಕಯೊಂದನ್ನು ನೀಡಿದ್ದಾರೆ.


ಭಾರತ-ಅಮೆರಿಕ ಸಂಬಂಧಕ್ಕೆ ಸಂಬಂಧಿಸಿ ಸೆನೆಟರ್ ಒಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು,’ಹಲವಾರು ಕಾರಣಗಳಿಗಾಗಿ, ಭಾರತವನ್ನೇ ಕೇಂದ್ರವಾಗಿಟ್ಟುಕೊಂಡು ನಾವು ಕೆಲಸ ಮಾಡಬೇಕಾಗುತ್ತದೆ. ಅವರು (ಭಾರತ) ನಮ್ಮ ಅತ್ಯಂತ ಆಪ್ತ ಭಾಗೀದಾರರ ಪೈಕಿ ಓರ್ವರಾಗಿದ್ದಾರೆ’ ಎಂದು ಗುರುವಾರ ಸೆನೆಟ್‌ಗೆ ತಿಳಿಸಿದ್ದಾರೆ.

ಹಾಗೇ ‘ಉಭಯ ದೇಶಗಳ ರಕ್ಷಣಾ ಮತ್ತು ವಿದೇಶ ವ್ಯವಹಾರಗಳ ಸಚಿವರ ನಡುವೆ ನಡೆಯಲಿರುವ ಜಂಟಿ ಸಭೆಯು ತುಂಬಾ, ತುಂಬಾ ಅಗತ್ಯವಾಗಿದೆ’ ಎಂದು ಪಾಂಪಿಯೊ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಂದ್ ಮಾಡುತ್ತೇವೆ ಎಂದು ಹೇಳುವ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ- ಡಿ.ಕೆ.ಶಿವಕುಮಾರ್