Publish Date: Mon, 08 Oct 2018 (17:58 IST)
Updated Date: Mon, 08 Oct 2018 (18:01 IST)
ಗಣೇಶ ಮೆರವಣಿಗೆ ವೇಳೆ ಪಿಎಸ್ ಐ ಅವರನ್ನು ಯುವಕರು ಭುಜದ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.
ದಾವಣಗೆರೆ ನಗರದ ಮಹಾನಗರ ಪಾಲಿಕೆ ಮುಂಭಾಗ ಹಿಂದು ಮಹಾಸಭಾ ಗಣೇಶ ಮೆರವಣಿಗೆ ವೇಳೆ ಅರಸಿಕೆರೆ ಪಿಎಸ್ ಐ ಸಿದ್ದೇಶ್ ಅವರನ್ನು ಯುವಕರು ಭುಜದ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.
ಈಚೆಗೆ ದಫೇದಾರ್ ಹನುಮಂತಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಿಂದ ಅಮಾನತ್ ಆಗಿ ನಂತರ ಅರಸಿಕೆರೆ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಸಿದ್ದೇಶ್ ಅಧಿಕಾರ ಸ್ವೀಕರಿಸಿದ್ದರು.
ದಾವಣಗೆರೆಯಲ್ಲಿ ಹಿಂದು ಮಹಾಸಭಾ ಗಣಪ ಬೃಹತ್ ಮೆರವಣಿಗೆ ವೇಳೆ ಹೆಚ್ಚುವರಿ ಕೆಲಸದ ಮೇಲೆ ದಾವಣಗೆರೆಗೆ ಆಗಮಿಸಿದ್ದುರ. ಆಗ ಯುವಕರು, ಅವರ ಅಭಿಮಾನಿಗಳು ಪಿಎಸ್ಐ ಸಿದ್ದೇಶ್ ಅವರನ್ನು ಹೊತ್ತು ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ.