Publish Date: Thu, 16 Aug 2018 (16:53 IST)
Updated Date: Thu, 16 Aug 2018 (16:56 IST)
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ದಾಖಲೆ ಪ್ರಮಾಣದಲ್ಲಿ ರಕ್ತದಾನಿಗಳು ರಕ್ತದದಾನ ಮಾಡಿದ ಹಿನ್ನಲೆಯಲ್ಲಿ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಆಯೋಜಕರೊಡನೆ ಕುಣಿದು ಕುಪ್ಪಳಿಸಿದ್ರು.
ಮಳವಳ್ಳಿಯ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಆ.15 ರಂದು ಯೋಧರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರಕ್ಕೆ ಆಗಮಿಸಿದ ಶಾಸಕ ಡಾ.ಕೆ.ಅನ್ನದಾನಿ ತಮ್ಮ ಸ್ನೇಹಿತರು, ಕಾರ್ಯಕರ್ತರಿಗೆ ಪೋನ್ ಮಾಡಿ ಕರೆಸಿ ರಕ್ತದಾನ ಮಾಡಿಸಿ ದಾಖಲೆಗೆ ಸಹಕರಿಸಿದ ಹಿನ್ನಲೆಯಲ್ಲಿ ಸಂತಸಗೊಂಡ ಆಯೋಜಕರು ಸತ್ಯ ಹರಿಶ್ಚಂದ್ರ ಚಿತ್ರದ ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸಿದ್ರು. ಶಾಸಕರು ಸಹ ಸಾಥ್ ಕೊಟ್ಟು ಸಖತ್ ಸ್ಟೆಪ್ ಹಾಕಿದ್ರು.