Select Your Language

Notifications

webdunia
webdunia
webdunia
webdunia

ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ

ಭಾರಿ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಜನ ಜೀವನ ಅಸ್ತವ್ಯಸ್ತ ಗೊಂಡಿದೆ. ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ.

ನದಿ ಪಾತ್ರದ  ಜನರಿಗೆ ಎಚ್ಚರಿಕೆ  ಇಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಬಂಟ್ವಾಳ ಬಳಿ ಜಕ್ರಿಬೆಟ್ಟು ಗೂಡಿನ  ಬಳಿ ಮುಂತಾದ ಕಡೆಗಳಲ್ಲಿ ನದಿ ನೀರು ಪೇಟೆಯನ್ನು ಆವರಿಸಿದೆ. ಕುಕ್ಕೆ ಸುಬ್ರಮಣ್ಯ ದ್ವೀಪವಾಗಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿ ಜಲಾವೃತ ಆಗಿದ್ದು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಕೋಟ್ಯಂತರ ರುಪಾಯ ನಷ್ಟವಾಗಿದೆ.

ಭೂ ಕುಸಿತದ  ಹಿನ್ನಲೆಯಲ್ಲಿ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಮಂಗಳೂರು ಮಡಿಕೇರಿ ರಸ್ತೆಯಲ್ಲಿ  ಸಂಪಾಜೆ ಬಳಿ ರಸ್ತೆಯಲ್ಲಿ ಬಿರುಕು ಹಾಗೂ ಭೂ ಕುಸಿತ ಹಿನ್ನಲೆಯಲ್ಲಿ ಈ ಮಾರ್ಗದಲ್ಲೂ  ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಮಂಗಳೂರು ಬೆಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಆಗಿದೆ. ಧರ್ಮಸ್ಥಳ ಕುಕ್ಕೆ ಸುಬ್ರಮಣ್ಯ ಆಗಮಿಸುವ ಭಕ್ತರು ಮಳೆ ಕಡಿಮೆ ಅದ ಮೇಲೆ ಪ್ರವಾಸ ಮಾಡಿದರೆ ಸಂಕಷ್ಟದಿಂದ ಪಾರು ಆಗಬಹುದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಾಗರ ಪಂಚಮಿ: ಚೇಳು ಜಾತ್ರೆ