Select Your Language

Notifications

webdunia
webdunia
webdunia
webdunia

ಪುರುಷರೇ ಎಚ್ಚರ! ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಇದೂ ಕಾರಣವಾಗಬಹುದು!

ಪುರುಷರೇ ಎಚ್ಚರ! ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಇದೂ ಕಾರಣವಾಗಬಹುದು!
ಬೆಂಗಳೂರು , ಗುರುವಾರ, 16 ಆಗಸ್ಟ್ 2018 (08:49 IST)
ಬೆಂಗಳೂರು: ಆಹಾರ, ಮಾಡುವ ಕೆಲಸಗಳು, ಒತ್ತಡಗಳಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕೇಳಿದ್ದೇವೆ. ಅದಕ್ಕೆ ಹೊಸದೊಂದು ಸೇರ್ಪಡೆ ಇಲ್ಲಿದೆ ನೋಡಿ.

ಒಂದು ಅಧ್ಯಯನ ವರದಿ ಪ್ರಕಾರ ಪುರುಷರು ದಿನದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿದ್ದರೆ ಅವರಲ್ಲಿ ವೀರ್ಯಾಣುವಿನ ಸಂಖ್ಯೆ ಶೇ.35 ರಷ್ಟು ಕಡಿಮೆಯಾಗುವ ಅಪಾಯವಿದೆಯಂತೆ!

18-22 ವರ್ಷದ ಯುವಕರ ಮೇಲೆ ಅಧ್ಯಯನ ನಡೆಸಿ ಅಧ್ಯಯನಕಾರರು ಈ ತೀರ್ಮಾನಕ್ಕೆ ಬಂದಿದ್ದಾರಂತೆ. ದೈಹಿಕವಾಗಿ ಚಟುವಟಿಕೆಯಿಂದಿರುವ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಹೆಚ್ಚಾಗುತ್ತದೆ. ಅದೇ ಸುದೀರ್ಘ ಕಾಲ ಸೋಮಾರಿಯಂತೆ ಟಿವಿ ನೋಡುತ್ತಾ ಚಟುವಟಿಕೆಯಿಲ್ಲದೇ ಕಳೆಯುವುದರಿಂದ ವೀರ್ಯಾಣುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಮಾಡುವ ಈ ತಪ್ಪುಗಳೇ ನಿಮ್ಮ ಲೈಂಗಿಕ ಸುಖವನ್ನು ಹಾಳುಮಾಡಬಹುದು ಹುಷಾರು!