Publish Date: Thu, 03 Jan 2019 (15:04 IST)
Updated Date: Thu, 03 Jan 2019 (15:06 IST)
ಆಯತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಯುವುಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಬಿಕ್ಕೋಡು ಬಳಿ ಘಟನೆ ಸಂಭವಿಸಿದೆ. ಬೈಕೆರೆಯ ಹರ್ಷ (19), ಸಕಲೇಶಪುರದ ಪ್ರಜ್ವಲ್ (20) ಬೈಕ್ ಮೇಲಿಂದ ಆಯತಪ್ಪಿ ಬಿದ್ದು ಸಾವಿಗೀಡಾದ ಯುವಕರಾಗಿದ್ದಾರೆ.
ಸಕಲೇಶಪುರದಿಂದ ಬೇಲೂರಿಗೆ ಕಾರ್ಯ ನಿಮಿತ್ತ ಆಗಮಿಸುತ್ತಿದ್ದ ಯುವಕರು, ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ದುರಂತ ಅಂತ್ಯಕಂಡಿದ್ದಾರೆ.
ಹೆಲ್ಮೆಟ್ ಧರಿಸಿ ಚಲಿಸಿದ್ದರೆ ಪ್ರಾಣಾಪಾಯದಿಂದ ಪಾರಾಗಬಹುದಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಬೇಲೂರು ತಾಲ್ಲೂಕು ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಈ ಕುರಿತು
ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.