Select Your Language

Notifications

webdunia
webdunia
webdunia
webdunia

ಬೆಂಕಿ ನಂದಿಸಲು ಹೋದ ರೈತ ಸುಟ್ಟುಕರಕಲಾದ…!

ಬೆಂಕಿ ನಂದಿಸಲು ಹೋದ ರೈತ ಸುಟ್ಟುಕರಕಲಾದ…!
ಚಿಕ್ಕೋಡಿ , ಬುಧವಾರ, 2 ಜನವರಿ 2019 (16:11 IST)
ಪಕ್ಕದ ಹೊಲದಲ್ಲಿ ಹತ್ತಿದ್ದ ಬೆಂಕಿ ನಂದಿಸಲು ಹೋಗಿದ್ದ ರೈತನೊಬ್ಬ ಸುಟ್ಟುಕರಕಲಾಗಿರುವ ಘಟನೆ ನಡೆದಿದೆ.
ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನವಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ  ತಾಲೂಕಿನ ನೇಜ್ ಗ್ರಾಮದ ರೈತ ಮೃತ ದುರ್ದೈವಿಯಾಗಿದ್ದಾನೆ.

ಈರಗೌಡಾ  ರಾಮಗೌಡಾ ರೊಡ್ಡಪಾಟೀಲ(65) ಸಾವನ್ನಪ್ಪಿರುವ ರೈತನಾಗಿದ್ದಾನೆ.  
ಕಟಾವು ಆದ ಕಬ್ಬಿನ  ಒಣಗಿದ ಹುಲ್ಲಿಗೆ ಬೆಂಕಿ ಇಡುವಾಗ ಘಟನೆ ನಡೆದಿದೆ. ಪಕ್ಕದ ರೈತನ ಹೊಲಕ್ಕೆ ಹತ್ತಿದ ಬೆಂಕಿ ನಂದಿಸಲು ಹೋದಾಗ ಹತ್ತಿಕೊಂಡ ಬೆಂಕಿಯಿಂದಾಗಿ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಬೆಂಕಿ ನಂದಿಸಲು ಬಂದ ಸದಲಗಾ ಅಗ್ನಿ ಪರ್ವತ ವಾಹನ ಬೆಂಕಿಯನ್ನು ನಂದಿಸಿತು. ಬೆಂಕಿ ತಗುಲಿದ ರೈತನನ್ನು ಬೆಳಗಾವಿ ಸರಕಾರಿ  ಆಸ್ಪತ್ರೆಗೆ ದಾಖಲು ಮಾಡಿಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರೆಳೆದನು.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷಾಂತರ ಮೌಲ್ಯದ ರಕ್ತಚಂದನ ವಶಕ್ಕೆ