Publish Date: Tue, 01 Jan 2019 (17:07 IST)
Updated Date: Tue, 01 Jan 2019 (17:08 IST)
ಹದಗೆಟ್ಟ ರಸ್ತೆಯನ್ನು ದುರಸ್ಥಿಗೊಳಿಸಿ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಹೊಸಕೋಟೆ ತಾಲೂಕಿನ ಐಓಸಿ-ಮಾಕನಹಳ್ಳಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಐಓಸಿ – ಮಾಕನಹಳ್ಳಿ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಜೀವ ಒತ್ತೆ ಇಡಬೇಕಾದ ಪರಿಸ್ಥಿತಿ ಎದುರಾಗಿದೆ.
ರಸ್ತೆಯ ಧೂಳಿನಿಂದಾಗಿ ಬೆಳೆದ ರೇಷ್ಮೆ ಗಿಡಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಕೈಗೆ ಸಿಗದೆ ಪಡೆದ ಸಾಲ ತೀರಿಸಲು ತೊಂದರೆಯಾಗುತ್ತಿದೆ. ಪ್ರತಿ ದಿನ ಸಂಚಾರ ಮಾಡುವ ಸಾವಿರಾರು ಪೆಟ್ರೋಲ್ ಡೀಸೆಲ್ ಟ್ಯಾಂಕರ್ ಗಳ ಸಂಚಾರದಿಂದಾಗಿ ಬೆಳೆ ಧೂಳಿನಿಂದ ಹಾಳಾಗುತ್ತಿದೆ ಎಂದು ಆರೋಪಿಸಿ
ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.