Publish Date: Mon, 31 Dec 2018 (12:15 IST)
Updated Date: Mon, 31 Dec 2018 (12:22 IST)
ಹಾಸನ: ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಕಾಫಿ ಶಾಪ್ ಬಳಿ ಇಬ್ಬರು ಪ್ರೇಮಿಗಳು ರಸ್ತೆಯಲ್ಲಿಯೇ ನಿಂತು ಚುಂಬಿಸಿಕೊಂಡು ರೊಮ್ಯಾನ್ಸ್ ಶುರುಮಾಡಿಕೊಂಡಿದ್ದರು. ಇವರಿಬ್ಬರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಕಾಫಿ ಶಾಪ್ ಗೆ ಬಂದ ಪ್ರೇಮಿಗಳು ರಸ್ತೆಯಲ್ಲಿಯೇ ಸರಸ ಸಲ್ಲಾಪಕ್ಕಿಳಿದಿದ್ದಾರೆ. ಮೊದಲಿಗೆ ಹುಡುಗ ಪ್ರಿಯತಮೆಗೆ ಚುಂಬಿಸಿದ್ದಾನೆ. ನಂತರ ಹುಡುಗಿ ಪ್ರಿಯಕರನನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾಳೆ. ಒಂದು ಗಂಟೆಗಳ ಕಾಲ ಇವರಿಬ್ಬರೂ ಯಾರ ಅರಿವಿಲ್ಲದೇ ಮೈಮರೆತಿದ್ದಾರೆ. ಇವರಿಬ್ಬರ ಈ ವಿಡಿಯೋ ಅನ್ನು ಯಾರೋ ತಮ್ಮ ಮೊಬೈಲ್ ನಲ್ಲಿ ರೇಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇವರಿಬ್ಬರ ಈ ಸರಸ ಸಲ್ಲಾಪ ಸ್ಥಳೀಯರಿಗೆ ತೀರಾ ಮುಜುಗರವನ್ನುಂಟುಮಾಡಿದೆ. ಅದೂ ಅಲ್ಲದೇ ಹಾನಸಲದ್ಲಿ ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆತಂಕ ಪಡುತ್ತಿದ್ದರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ