Publish Date: Sat, 17 Jun 2023 (20:44 IST)
Updated Date: Sat, 17 Jun 2023 (20:15 IST)
ಕುಡಿದ ಅಮಲಿನಲ್ಲಿ ಯುವಕರು ಹುಚ್ಚಾಟ ಮಾಡಿರೋ ಘಟನೆ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಕುಡಿತದ ಅಮಲಿನಲ್ಲಿ ಬೆತ್ತಲೆ ನೃತ್ಯ ಮಾಡಿದ್ದಾರೆ. ಜೂನ್ 13ರ ರಾತ್ರಿ ಮಡಿಕೇರಿ ರಸ್ತೆಯ ಬಾರ್ ಒಂದರಲ್ಲಿ ಎಲ್ಲರೂ ಪಾನಮತ್ತರಾಗಿ ಹೊರಗೆ ಬಂದು, ಡ್ಯಾನ್ಸ್ ಮಾಡಿ ಕುಡಿದ ಅಮಲಿನಲ್ಲಿ ಜೊತೆಯಲ್ಲಿದ್ದವನನ್ನು ಬೆತ್ತಲುಗೊಳಿಸಿ ಕಾರಿನಲ್ಲಿ ಅಟ್ಟಾಡಿಸಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಿದ್ದಾರೆ..ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.