Select Your Language

Notifications

webdunia
webdunia
webdunia
webdunia

ಅಂಡರ್‌ವರ್ಲ್ಡ್ ಡಾನ್ ಚೋಟಾ ರಾಜನ್ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳ್ತಿರಿ

ಅಂಡರ್‌ವರ್ಲ್ಡ್ ಡಾನ್ ಚೋಟಾ  ರಾಜನ್ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳ್ತಿರಿ
ಮುಂಬೈ , ಮಂಗಳವಾರ, 21 ನವೆಂಬರ್ 2023 (18:00 IST)
ಮುಂಬೈ ಮತ್ತು ಇತರ ನಗರಗಳಲ್ಲಿ ಭಾರಿ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾನೆ ಎಂದು ಅಪರಾಧ ದಳ ವಿಭಾಗದ ಅನಾಮಧೇಯರಾಗಿರಲು ಬಯಸಿದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
 
ಛೋಟಾ ರಾಜನ್, ಚೀನಾ, ಥೈಲೆಂಡ್, ಸಿಂಗಾಪೂರ್ ದೇಶಗಳಲ್ಲಿ ಅತ್ಯಾಧುನಿಕ ಹೋಟೆಲ್‌ಗಳ ಮಾಲೀಕನಾಗಿದ್ದು, ಸಿಂಗಾಪೂರದಲ್ಲಿ ಕೆಲ ಚಿನ್ನಾಭರಣಗಳ ಮಳಿಗೆಗಳನ್ನು ಹೊಂದಿದ್ದಾನೆ.  ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ರಾಷ್ಟ್ರಗಳಲ್ಲಿ ವಜ್ರ ವ್ಯಾಪಾರದಲ್ಲಿ ಹೂಡಿಕೆ ಮಾಡಿದ್ದಾನೆ.ಭೂಗತ ದೊರೆ ಛೋಟಾ ರಾಜನ್ ಒಟ್ಟು ಆಸ್ತಿ 4000-5000 ಕೋಟಿ ರೂಪಾಯಿಗಳಷ್ಟಾಗಿದ್ದು, ಶೇ.50ರಷ್ಟು ಹೂಡಿಕೆಯನ್ನು ಭಾರತದಲ್ಲಿ ಹೊಂದಿದ್ದಾನೆ  ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ರಾಜನ್, ಜಿಂಬಾಬ್ವೆ ದೇಶದಲ್ಲಿ ನೆಲಸಲು ಅಲ್ಲಿನ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದನು. ಆದರೆ, ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರಾಜನ್‌ಗೆ ಆಶ್ರಯ ನೀಡಲು ಜಿಂಬಾಬ್ವೆ ನಿರಾಕರಿಸಿತ್ತು. ಝಡ್‌ಪ್ಲಸ್ ಶ್ರೇಣಿಯ ಭದ್ರತೆಗಾಗಿ ಕೂಡಾ ಕೋರಿದ್ದನು ಎನ್ನಲಾಗಿದೆ. ಆದರೆ, ಜಿಂಬಾಬ್ವೆ ಅಧಿಕಾರಿಗಳು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
 
ಜಿಂಬಾಬ್ವೆ ಅಧಿಕಾರಿಗಳು ಭದ್ರತೆ ನೀಡಲು ನಿರಾಕರಿಸಿದಾಗ ರಾಜನ್, ಕಿಡ್ನಿ ವೈಫಲ್ಯ ಚಿಕಿತ್ಸೆಗೊಳಗಾದಾಗ ದಾವುದ್ ಬೆಂಬಲಿಗರು ದಾಳಿ ನಡೆಸಬಹುದು ಎನ್ನುವ ಆತಂಕದಿಂದ ಜಿಂಬಾಬ್ವೆಗೆ ತೆರಳುವುದನ್ನು ಕೈ ಬಿಟ್ಟಿದ್ದನು ಎನ್ನಲಾಗಿದೆ.
 
ಮಹಾರಾಷ್ಟ್ರದಲ್ಲಿ ಛೋಟಾ ರಾಜನ್ ವಿರುದ್ಧ ಮೋಕಾ ಅಡಿಯಲ್ಲಿ 75 ಪ್ರಕರಣಗಳು ದಾಖಲಾಗಿದ್ದು, ಹೆಚ್ಚು ಪ್ರಕರಣಗಳು ದಾಖಲಾಗಿದ್ದರಿಂದ, ಮೂರು ವರ್ಷಗಳವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿವೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಛತ್ರಪತಿ ಶಿವಾಜಿ ನೆನಪಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ: ನಿತಿನ್ ಗಡ್ಕರಿ